'ಸ್ಲಂ ಡಾಗ್' ತಂಡಕ್ಕೆ ದೊರೆತ 'ರೆಡ್ ಕಾರ್ಪೆಟ್' ಸ್ವಾಗತ

ಸೋಮವಾರ, 23 ಫೆಬ್ರವರಿ 2009 (12:35 IST)
ಇಲ್ಲಿ ಸೋಮವಾರ ಅಧಿಕೃತವಾಗಿ ಘೋಷಿತವಾದ 81ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ರೆಡ್ ಕಾರ್ಪೆಟ್ ಸ್ವಾಗತದೊಂದಿಗೆ 'ಸ್ಲಮ್‌ಡಾಗ್ ಮಿಲಿಯನೇರ್' ಸಿನಿಮಾ ತಂಡ ಎಂಟು ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಳ್ಳುವ ಮೂಲಕ ಮರೆಯಲಾರದ ಕ್ಷಣಗಳಿಗೆ ಸಾಕ್ಷಿಯಾಯಿತು.

ನಿರ್ದೇಶಕ ಡೇನಿ ಬಾಯ್ಲ್ ಅವರ ಮುಂಬೈ ಕೊಳೆಗೇರಿ ಮಕ್ಕಳ ಸಾಹಸಗಾಥೆ ಆಧಾರಿತ 'ಸ್ಲಂ ಡಾಗ್ ಮಿಲಿಯನೇರ್' ಚಿತ್ರ ಒಟ್ಟು 8 ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಳ್ಳುವ ಮೂಲಕ ಕೋಟ್ಯಂತರ ಭಾರತೀಯರ ಕನಸು ನನಸಾದಂತಾಗಿದೆ.

ಹಾಲಿವುಡ್‌ನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಘೋಷಣೆಗೂ ಮುನ್ನ ಸುಂದರವಾದ ಫ್ರಾಕ್ಸ್ ಹಾಗೂ ವಸ್ತ್ರಧಾರಣೆಯೊಂದಿಗೆ ನಟ-ನಟಿಯರು ಹಾಜರಾಗುವ ಮೂಲಕ ಸಮಾರಂಭ ಕಳೆಗೂಡಿತ್ತು.

'ತುಂಬಾ ಖುಷಿ ಎನಿಸುತ್ತಿದೆ' ಎಂದು ಮುಂಬೈ ಕೊಳಗೇರಿಯ ಹಾಗೂ ಹತ್ತರ ಹರೆಯದ ಅಜರ್ ಮೊಹಮ್ಮದ್ ಇಸ್ಮಾಯಿಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.

ಈ ಸಂದರ್ಭದಲ್ಲಿ ಇಂಗ್ಲಿಷ್ ಸರಿಯಾಗಿ ತಿಳಿಯದ ಇಸ್ಮಾಯಿಲ್ ನೆರೆವಿಗೆ ಬಂದಾಕೆ ತಾನ್ಯಾ ಚೆಡ್ಡಾ. ಆಸ್ಕರ್ ಸಮಾರಂಭಕ್ಕೆ ಆಗಮಿಸಿದ್ದ ತಾನ್ಯಾ ಸೇರಿದಂತೆ ಬಹುತೇಕರಿಗೆ ಇದು ಮರೆಯಲಾರದ ಕ್ಷಣ ಎಂಬುದಾಗಿ ಸಂತಸ ವ್ಯಕ್ತಪಡಿಸಿದರು. ರೆಡ್ ಕಾರ್ಪೆಟ್ ಸ್ವಾತದ ಕುರಿತು ಸುದ್ದಿಗಾರರು ಪ್ರಶ್ನೆಗೆ ಮಕ್ಕಳು ತುಂಬಾ ಪುಳಕಿತರಾಗಿ ಉತ್ತರ ನೀಡಿದ್ದಲ್ಲದೇ, ಅಚ್ಚರಿಯನ್ನು ವ್ಯಕ್ತಪಡಿಸಿದರು.

ನಾನು ಕನಸಿನಲ್ಲೂ ಎಣಿಸಿರಲಿಲ್ಲ, ಅದು ಹಾಲಿವುಡ್ ಸಮಾರಂಭದಲ್ಲಿ ಹಾಜರಾಗುವುದು ಅಲ್ಲದೇ ರೆಡ್ ಕಾರ್ಪೆಟ್ ಸ್ವಾಗತ ಜತೆಗೆ ಸ್ಲಂ ಡಾಗ್ ಉತ್ತಮವಾದ ಸಿನಿಮಾ ಎಂದು ತಿಳಿಸಿದಾತ ಜಮಾಲ್, ಆಯುಷ್ ಖಾಡೇಕಾರ್.

ವೆಬ್ದುನಿಯಾವನ್ನು ಓದಿ