ಬಟ್ಟೆ ಅಂಗಡಿ ತೆರೆದರೂ ಬರಲು ಹಿಂಜರಿಯುತ್ತಿರುವ ಜನ

ಶನಿವಾರ, 9 ಮೇ 2020 (08:36 IST)
ಬೆಂಗಳೂರು: ಕೊರೋನಾ ವೈರಸ್ ಎಂಬ ಮಹಾಮಾರಿ ಜನರಲ್ಲಿ ಎಷ್ಟು ಭಯ ಹುಟ್ಟಿಸಿದೆಯೆಂದರೆ ಅಂಗಡಿಗಳಿಂದ ವಸ್ತು ಖರೀದಿಸಲೂ ಜನ ಹಿಂದೆ ಮುಂದೆ ನೋಡುವಂತಾಗಿದೆ.


ಲಾಕ್ ಡೌನ್ ಸಡಿಲಿಕೆಯಾದ ಬಳಿಕ ಬಟ್ಟೆ ಅಂಗಡಿಗಳನ್ನು ಸಂಜೆಯ ತನಕ ತೆರೆಯಲು ಕೆಲವೆಡೆ ಅವಕಾಶ ನೀಡಲಾಗಿದೆ. ಹಾಗಿದ್ದರೂ ಅಂಗಡಿಗೆ ಬಂದು ಖರೀದಿ ಮಾಡಲು ಜನ ಭಯಪಡುತ್ತಿದ್ದಾರೆ.

ಹೊಸ ಬಟ್ಟೆ ಖರೀದಿಸುವಾಗ ಅದರ ಅಳತೆ ಸರಿಯಾಗಿದೆಯೇ ಎಂದು ಮೈಮೇಲೆ ತಗುಲಿಸಲೂ ಹಿಂದೆ ಮುಂದೆ ನೋಡುವಂತಾಗಿದೆ. ಕೆಲವು ದೊಡ್ಡ ಮಳಿಗೆಗಳ ಎದುರು ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದ್ದರೂ ಜನರಲ್ಲಿ ಹಿಂಜರಿಕೆ ಕಡಿಮೆಯಾಗಿಲ್ಲ. ಹೀಗಾಗಿ ಅಂಗಡಿ ಮಾಲಿಕರು ಹೇಗಿದ್ದರೂ ಜನರೇ ಬರುತ್ತಿಲ್ಲ. ಹೀಗಾಗಿ ನಿಯಮದ ಪ್ರಕಾರವೇ ಸಂಜೆ ಏಳು ಗಂಟೆಯೊಳಗೆ ಬಾಗಿಲು ಮುಚ್ಚುವುದಕ್ಕೆ ಏನೂ ತೊಂದರೆಯಿಲ್ಲ ಎನ್ನುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ