ಏಕದಿನ ವಿಶ್ವಕಪ್ ಕ್ರಿಕೆಟ್: ಟೀಂ ಇಂಡಿಯಾಗೆ ಸವಾಲಿನ ಗುರಿ ಕೊಟ್ಟ ಅಫ್ಘಾನಿಸ್ತಾನ

ಬುಧವಾರ, 11 ಅಕ್ಟೋಬರ್ 2023 (18:06 IST)
ನವದೆಹಲಿ: ಏಕದಿನ ವಿಶ್ವಕಪ್ ಕ್ರಿಕೆಟ್ ನ ಇಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಅತಿಥೇಯ ಭಾರತದ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದೆ. 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿದೆ.

ದೆಹಲಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನಿಸ್ತಾನದ ಪರ ಹಶ್ಮತ್ತುಲ್ಲಾ ಶಾಹಿದಿ 80 ರನ್ ಸಿಡಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಅವರಿಗೆ ತಕ್ಕ ಸಾಥ್ ನೀಡಿದ ಅಜ್ಮತ್ತುಲ್ಲಾ ಒಮರ್ ಜೈ 62 ರನ್ ಗಳ ಕೊಡುಗೆ ನೀಡಿದರು.

ಬ್ಯಾಟಿಂಗ್ ಗೆ ಸಂಪೂರ್ಣ ಸಹಕರಿಸುತ್ತಿದ್ದ ಪಿಚ್ ನಲ್ಲಿ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಕೇವಲ 39 ರನ್ ನೀಡಿ 4 ವಿಕೆಟ್ ಕಬಳಿಸಿದರು. ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದರೆ ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು. ಮೊಹಮ್ಮದ್ ಸಿರಾಜ್ ಮತ್ತೆ ವಿಕೆಟ್ ಲೆಸ್ ಆದರೆ, ಇಂದು ರವೀಂದ್ರ ಜಡೇಜಾ ಕೂಡಾ ವಿಕೆಟ್ ಕೀಳಲು ವಿಫಲರಾದರು. ಭಾರತ ಇದೀಗ ಗೆಲ್ಲಲು 273 ರನ್ ಗಳಿಸಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ