Ajinkya Rehane: ರೆಹಾನೆಗೆ ಟೆಸ್ಟ್ ಕ್ರಿಕೆಟ್ ಬಾಗಿಲೂ ಬಂದ್
ಶನಿವಾರ, 2 ಡಿಸೆಂಬರ್ 2023 (11:49 IST)
ಮುಂಬೈ: ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಅಜಿಂಕ್ಯಾ ರೆಹಾನೆಗೆ ದ.ಆಫ್ರಿಕಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಅವಕಾಶ ಸಿಕ್ಕಿಲ್ಲ. ಹೀಗಾಗಿ ಅವರ ಟೆಸ್ಟ್ ಕೆರಿಯರ್ ಕೂಡಾ ಮುಕ್ತಾಯವಾಗುತ್ತಿರುವ ಸೂಚನೆ ಆಯ್ಕೆಗಾರರಿಂದ ಸಿಕ್ಕಿದೆ.
ತಂಡದಲ್ಲಿ ಹೊಸ ಆಟಗಾರರನ್ನು ಬೆಳೆಸುವ ದೃಷ್ಟಿಯಿಂದ ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್ ಮುಂತಾದವರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ.
ಹೀಗಾಗಿ ರೆಹಾನೆ, ಪೂಜಾರ ಮುಂತಾದ ಕ್ರಿಕೆಟಿಗರು ಸದ್ದಿಲ್ಲದೇ ಮರೆಯಾಗುತ್ತಿದ್ದಾರೆ. ಆಪತ್ಕಾಲದಲ್ಲಿ ಟೀಂ ಇಂಡಿಯಾದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದ ರೆಹಾನೆ ಇಂದು ಅವಕಾಶ ವಂಚಿತರಾಗಿದ್ದಾರೆ.
ಕಳೆದ ಐಪಿಎಲ್ ನಲ್ಲಿ ಅವರು ಗಮನಾರ್ಹ ಪ್ರದರ್ಶನ ನೀಡಿದ್ದರು. ಹೀಗಾಗಿ ಒಮ್ಮೆ ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದಿದ್ದರು. ಆದರೆ ಈಗ ಮತ್ತೆ ಆಫ್ರಿಕಾ ಪ್ರವಾಸಕ್ಕೆ ಹೊಸ ಆಟಗಾರರಿಗೆ ಮಣೆ ಹಾಕಲಾಗಿದ್ದು, ಹಳಬರಾದ ರೆಹಾನೆ ಸಂಪೂರ್ಣ ಮೂಲೆಗುಂಪಾಗಿದ್ದಾರೆ. ಇನ್ನು ಅವರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗುವ ಸಾಧ‍್ಯತೆ ಕಡಿಮೆ. ಹೀಗಾಗಿ ಪ್ರತಿಭಾವಂತ ಆಟಗಾರನ ಅಂತಾರಾಷ್ಟ್ರೀಯ ವೃತ್ತಿ ಜೀವನ ಹೆಚ್ಚು ಕಡಿಮೆ ಇಲ್ಲಿಗೆ ಮುಗಿದಂತೆಯೇ ಸರಿ.