ಏಷ್ಯಾ ಕಪ್ ಕ್ರಿಕೆಟ್: ಇಂದು ಭಾರತ-ಪಾಕ್ ಸೂಪರ್ ಫೋರ್ ಪಂದ್ಯದ ಮುಂದುವರಿದ ಭಾಗ

ಸೋಮವಾರ, 11 ಸೆಪ್ಟಂಬರ್ 2023 (08:40 IST)
ಕೊಲೊಂಬೋ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ನಿನ್ನೆ ಭಾರತ ಮತ್ತು ಪಾಕಿಸ್ತಾನ ನಡುವಿನ ಸೂಪರ್ ಫೋರ್ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಆದರೆ ಈ ಪಂದ್ಯಕ್ಕೆ ಇಂದು ಮೀಸಲು ದಿನ ನಿಗದಿಯಾಗಿದೆ.

ಹೀಗಾಗಿ ಇಂದು ನಿನ್ನೆ ಆಟ ನಿಂತಲ್ಲಿಂದ ಆರಂಭವಾಗಲಿದೆ. ನಿನ್ನೆ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 24.1 ಓವರ್ ಗಳಲ್ಲಿ 147 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಮಳೆ ಬಂದಿತ್ತು. ಬಳಿಕ ಆಟ ನಡೆಯಲಿಲ್ಲ.

ಇಂದು ಅಲ್ಲಿಂದಲೇ ಆಟ ಆರಂಭವಾಗಲಿದೆ. ಅಂದರೆ ಟೀಂ ಇಂಡಿಯಾ ಮತ್ತೆ ಬ್ಯಾಟಿಂಗ್ ಮುಂದುವರಿಸಲಿದ್ದು, ಇಂದೂ ಮಳೆಯಿಲ್ಲದೇ ಹೋದರೆ 50 ಓವರ್ ಗಳ ಆಟ ನಡೆಯಲಿದೆ. ಪಂದ್ಯ ಎಂದಿನಂತೆ ಅಪರಾಹ್ನ 3 ಗಂಟೆಗೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ