ಮಳೆ ಮುನ್ಸೂಚನೆ ಇಫೆಕ್ಟ್: ಭಾರತ-ಪಾಕ್ ಪಂದ್ಯಕ್ಕೆ ವೀಕ್ಷಕರೇ ಕಡಿಮೆ!

ಭಾನುವಾರ, 10 ಸೆಪ್ಟಂಬರ್ 2023 (17:19 IST)
ಕೊಲೊಂಬೋ: ಭಾರತ ಮತ್ತು ಪಾಕಿಸ್ತಾನ ನಡುವೆ ಎಲ್ಲೇ ಪಂದ್ಯ ನಡೆದರೂ ಮೈದಾನ ಭರ್ತಿಯಾಗುತ್ತದೆ. ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯವೆಂದರೆ ಜನರಲ್ಲಿ ಅಂತಹ ಉತ್ಸಾಹವಿರುತ್ತದೆ.

ಆದರೆ ಇದೀಗ ಏಷ್ಯಾ ಕಪ್ ಕ್ರಿಕೆಟ್ ನ ಕೊಲೊಂಬೋದಲ್ಲಿ ನಡೆಯುತ್ತಿರುವ ಭಾರತ-ಪಾಕಿಸ್ತಾನ ಸೂಪರ್ ಫೋರ್ ಪಂದ್ಯ ವೀಕ್ಷಿಸಲು ಮೈದಾನದಲ್ಲಿ ವಿರಳ ಸಂಖ್ಯೆಯಲ್ಲಿ ಜನ ಸೇರಿದ್ದಾರೆ.

ಕಾರಣ, ಪ್ರೇಮದಾಸ ಮೈದಾನದಲ್ಲಿ ನಡೆಯಲಿರುವ ಪಂದ್ಯಕ್ಕೆ ಮಳೆಯಾಗುವ ಸಾಧ‍್ಯತೆಯಿದೆ ಎಂದು ಮೊದಲೇ ಸೂಚನೆಯಿತ್ತು. ಇದಕ್ಕೆ ಮೊದಲು ಪಲ್ಲಿಕೆಲೆಯಲ್ಲಿ ನಡೆದಿದ್ದ ಲೀಗ್ ಪಂದ್ಯದಲ್ಲೂ ಮಳೆಯಾಗಿ ಪಂದ್ಯ ರದ್ದಾಗಿತ್ತು. ಹೀಗಾಗಿ ಈ ಬಾರಿ ಜನರು ಮೈದಾನದತ್ತ ಬರುವ ಉತ್ಸಾಹವನ್ನೇ ತೋರಲಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ