ಏಷ್ಯಾ ಕಪ್ ಕ್ರಿಕೆಟ್: ಪಾಕ್-ಲಂಕಾ ಪಂದ್ಯದ ಮೇಲೆ ಟೀಂ ಇಂಡಿಯಾ ಕಣ್ಣು

ಗುರುವಾರ, 14 ಸೆಪ್ಟಂಬರ್ 2023 (08:20 IST)
ಕೊಲೊಂಬೊ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಇಂದು ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ಮಹತ್ವದ ಸೂಪರ್ ಫೋರ್ ಪಂದ್ಯ ನಡೆಯಲಿದೆ.
 

ಇಂದು ನಡೆಯಲಿರುವ ಪಂದ್ಯದ ಮೇಲೆ ಟೀಂ ಇಂಡಿಯಾ ಕಣ್ಣು ನೆಟ್ಟಿದೆ. ಇಂದು ಗೆಲ್ಲುವ ತಂಡ ಭಾರತದ ಜೊತೆ ಫೈನಲ್ ಪಂದ್ಯವಾಡಲಿದೆ. ಈ ನಿಟ್ಟಿನಲ್ಲಿ ಇಂದಿನ ಪಂದ್ಯ ಮಹತ್ವದ್ದಾಗಿದೆ.

ಕಳೆದ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದಿರುವುದರಿಂದ ಪಾಕಿಸ್ತಾನಕ್ಕೆ ಫೈನಲ್ ಗೇರಲು ಇನ್ನೊಂದು ಅವಕಾಶ ಸಿಕ್ಕಂತಾಗಿದೆ.  ಎರಡೂ ತಂಡಗಳೂ ಕಳೆದ ಪಂದ್ಯದಲ್ಲಿ ಭಾರತದ ವಿರುದ್ಧ ಸೋಲನುಭವಿಸಿತ್ತು. ಪಾಕಿಸ್ತಾನ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ವೈಫಲ್ಯ ಅನುಭವಿಸಿತ್ತು. ಹೀಗಾಗಿ ಕಳೆದ ಪಂದ್ಯದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಮುಂದಾಗಲಿದೆ. ಇತ್ತ ಲಂಕಾ ಸರ್ವಾಂಗೀಣ ಪ್ರಯತ್ನ ನಡೆಸಿದರೂ ಭಾರತದ ವಿರುದ್ಧ ಸೋಲು ಅನುಭವಿಸಬೇಕಾಗಿ ಬಂದಿತ್ತು. ಬ್ಯಾಟಿಂಗ್ ನಲ್ಲಿ ಲಂಕಾ ಸುಧಾರಣೆ ಕಾಣಬೇಕಿದೆ. ತವರಿನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಫೈನಲ್ ತಲುಪುವುದು ಲಂಕಾ ಪಾಲಿಗೆ ಪ್ರತಿಷ್ಠೆಯ ವಿಚಾರವಾಗಲಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ