ಪೆವಿಲಿಯನ್ ನಿಂದಲೇ ಸಿಗ್ನಲ್: ಲಂಕಾ ಕೋಚ್ ಮೇಲೆ ರೋಹಿತ್, ಕೊಹ್ಲಿ, ದ್ರಾವಿಡ್ ದೂರು!

ಬುಧವಾರ, 13 ಸೆಪ್ಟಂಬರ್ 2023 (16:12 IST)
Photo Courtesy: Twitter
ಕೊಲೊಂಬೊ: ಭಾರತದ ವಿರುದ್ಧ ಏಷ್ಯಾ ಕಪ್ ಸೂಪರ್ ಫೋರ್ ಪಂದ್ಯದ ವೇಳೆ ಶ್ರೀಲಂಕಾ ಕೋಚ್ ಪೆವಿಲಿಯನ್ ನಿಂದ ಸಿಗ್ನಲ್ ನೀಡುತ್ತಿದ್ದುದು ಕಂಡುಬಂದಿತ್ತು.

ಭಾರತ ಬ್ಯಾಟಿಂಗ್ ಮಾಡುತ್ತಿದ್ದಾಗ ಯಾವ ರೀತಿ ಫೀಲ್ಡಿಂಗ್ ಸೆಟ್ ಮಾಡಬೇಕು, ಯಾವ ಬೌಲರ್ ನಿಂದ ಬೌಲಿಂಗ್ ಮಾಡಿಸಬೇಕು ಎಂದು ಶ್ರೀಲಂಕಾ ಕೋಚ್ ಪೆವಿಲಿಯನ್ ನಲ್ಲೇ ಕುಳಿತು ಮೈದಾನದಲ್ಲಿದ್ದ ಲಂಕಾ ಆಟಗಾರರಿಗೆ ಬೋರ್ಡ್ ಮೇಲೆ ಬರೆದು ಸೂಚನೆ ನೀಡುತ್ತಿದ್ದರು.

ಇದು ಟೀಂ ಇಂಡಿಯಾ ಗಮನಕ್ಕೆ ಬಂದಿದೆ. ಮೈದಾನದಲ್ಲಿರುವ ಆಟಗಾರರಿಗೆ ಪೆವಿಲಿಯನ್ ನಲ್ಲಿ ಕುಳಿತು ಈ ರೀತಿ ಸಲಹೆ ನೀಡಬಾರದು. ಇದರಿಂದ ಸಿಟ್ಟಿಗೆದ್ದ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ನೇರವಾಗಿ ಅಂಪಾಯರ್ ಗೆ ಈ ವಿಚಾರದ ಬಗ್ಗೆ ದೂರು ಸಲ್ಲಿಸಿದರು. ಬಳಿಕ ಲಂಕಾ ಕೋಚ್ ಮತ್ತು ನಾಯಕನಿಗೆ ಈ ರೀತಿ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.

ಈ ಹಿಂದೆಯೂ ಶ್ರೀಲಂಕಾ ಈ ರೀತಿ ಮೋಸದಾಟವಾಡಿತ್ತು. ಆಗಲೂ ಈ ಬಗ್ಗೆ ಆಕ್ಷೇಪ ಕೇಳಿಬಂದಿತ್ತು. ಆದರೆ ಟೀಂ ಇಂಡಿಯಾ ಅಷ್ಟಕ್ಕೇ ಸುಮ್ಮನಾಗದೇ ದೂರು ಸಲ್ಲಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ