ಏಕದಿನ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ದಾಖಲೆಗಳು ಹೇಗಿದೆ?

ಬುಧವಾರ, 15 ನವೆಂಬರ್ 2023 (09:00 IST)
ಮುಂಬೈ: ಐಸಿಸಿ ಏಕದಿನ ವಿಶ್ವಕಪ್ 2023 ರ ಮೊದಲ ಸೆಮಿಫೈನಲ್ ಇಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿದೆ.

ಇದುವರೆಗೆ ಟೀಂ ಇಂಡಿಯಾ ಎಂಟನೇ ಬಾರಿಗೆ ಏಕದಿನ ವಿಶ್ವಕಪ್ ಸೆಮಿಫೈನಲ್ ಗೇರಿದೆ. ಮೊದಲ ಬಾರಿಗೆ 1983 ರಲ್ಲಿ ಸೆಮಿಫೈನಲ್ ತಲುಪಿದ್ದ ಟೀಂ ಇಂಡಿಯಾ ಆ ವರ್ಷ ಮೊದಲ ವಿಶ್ವಕಪ್ ಗೆದ್ದು ವಿಶ್ವ ಕ್ರಿಕೆಟ್ ನ್ನು ದಂಗುಬಡಿಸಿತ್ತು. ಕಳೆದ ಬಾರಿ 2019 ರ ವಿಶ್ವಕಪ್ ನಲ್ಲೂ ಟೀಂ ಇಂಡಿಯಾ ಸೆಮಿಫೈನಲ್ ಗೇರಿತ್ತು.

ಒಟ್ಟು ಏಳು ಬಾರಿ ಸೆಮಿಫೈನಲ್ ತಲುಪಿದ ಟೀಂ ಇಂಡಿಯಾ ಗೆದ್ದಿದ್ದು ಮೂರು ಬಾರಿ ಗೆಲುವು ಕಂಡಿತ್ತು. ಈ ಪೈಕಿ ಎರಡು ಬಾರಿ ಫೈನಲ್ ಗೆದ್ದಿತ್ತು.  ಕಳೆದ ಬಾರಿಯೂ ವಿಶ್ವಕಪ್ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ಎದುರಾಗಿತ್ತು. ಅದು ಧೋನಿಯ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಆ ಪಂದ್ಯದಲ್ಲಿ ಟೀಂ ಇಂಡಿಯಾ ಸೋತು ಕೂಟದಿಂದ ನಿರ್ಗಮಿಸಿತ್ತು. ಈಗ ಮತ್ತೆ ನ್ಯೂಜಿಲೆಂಡ್ ಎದುರಾಗಿದ್ದು, ಕಳೆದ ಬಾರಿಯ ಸೋಲಿಗೆ ಸೇಡು ತೀರಿಸಿಕೊಳ್ಳುವ ವಿಶ್ವಾಸದಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ