ಐಪಿಎಲ್ 2024 ರಿಂದ ಎಲಿಮಿನೇಟ್ ಆದ ಗುಜರಾತ್ ಟೈಟನ್ಸ್

Krishnaveni K

ಮಂಗಳವಾರ, 14 ಮೇ 2024 (08:23 IST)
ಅಹಮ್ಮದಾಬಾದ್: ಐಪಿಎಲ್ 2024 ರಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಇದರಿಂದಾಗಿ ಗುಜರಾತ್ ಕೂಟದಿಂದಲೇ ನಿರ್ಗಮಿಸಿತು.

ಗುಜರಾತ್ ಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಆದರೆ ಮಳೆಯಿಂದಾಗಿ ಟಾಸ್ ಕೂಡಾ ಆಗದೇ  ಪಂದ್ಯ ರದ್ದಾಯಿತು. ಅಹಮ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯ ಆಯೋಜಿಸಲಾಗಿತ್ತು. ಮಳೆ ಗುಜರಾತ್ ಭರವಸೆಗೆ ತಣ್ಣೀರೆರಚಿತು.

ಈ ಕೂಟದಲ್ಲಿ ಗುಜರಾತ್ ಗೆ ಇನ್ನೂ ಒಂದು ಲೀಗ್ ಪಂದ್ಯ ಬಾಕಿಯಿದೆ. ಮೇ 16 ರಂದು ಸನ್ ರೈಸರ್ಸ್ ಹೈದರಾಬಾದ್ ಪರ ಗುಜರಾತ್ ಕೊನೆಯ ಲೀಗ್ ಪಂದ್ಯವಾಡಲಿದೆ. ಆದರೆ ಈಗಾಗಲೇ ಪ್ಲೇ ಆಫ್ ನಿಂದ ಹೊರಬಿದ್ದ ಗುಜರಾತ್ ಗೆ ಈ ಪಂದ್ಯ ಔಪಚಾರಿಕವಾಗಲಿದೆ.

ಇದುವರೆಗೆ ಗುಜರಾತ್ 13 ಪಂದ್ಯಗಳನ್ನಾಡಿದ್ದು ಈ ಪೈಕಿ 5 ಗೆಲುವು ಕಂಡಿದೆ. ಒಟ್ಟು 11 ಅಂಕ ಸಂಪಾದಿಸಿರುವ ಗುಜರಾತ್ ಅಂಕಪಟ್ಟಿಯಲ್ಲಿ 8 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇತ್ತ ಕೆಕೆಆರ್ 13 ಪಂದ್ಯಗಳಿಂದ 9 ಗೆಲುವುಗಳೊಂದಿಗೆ 19 ಅಂಕ ಸಂಪಾದಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ