ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಗೆ ಈಗ ಇವಳೇ ಮುದ್ದಾದ ಗೆಳತಿ!

ಶನಿವಾರ, 7 ಜುಲೈ 2018 (09:27 IST)
ಲಂಡನ್: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಗೆ ಹೊಸ ಗೆಳತಿ ಸಿಕ್ಕಿದ್ದಾಳೆ! ಆದರೆ ಏನೇನೋ ಯೋಚನೆ ಮಾಡೋದು ಬೇಡ. ಹಾರ್ದಿಕ್ ಫ್ರೆಂಡ್ ಆಗಿರುವ ಆ ಹೊಸ ಹುಡುಗಿ ಧೋನಿ ಪುತ್ರಿ ಜೀವಾ.

ಜೀವಾ ಆಗಾಗ ತನ್ನ ಅಪ್ಪನ ಜತೆಗೆ ಮುದ್ದಾದ ವಿಡಿಯೋ, ಫೋಟೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಳು. ಇದೀಗ ಹಾರ್ದಿಕ್ ಪಾಂಡ್ಯ ಜತೆಗೆ ಆಕೆಯ ಫ್ರೆಂಡ್ ಶಿಪ್ ಜೋರಾಗಿಯೇ ನಡೆಯುತ್ತಿದೆ.

ಮೊನ್ನೆಯಷ್ಟೇ ಐರ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಅಪ್ಪನ ಬದಲು ಹಾರ್ದಿಕ್ ಗೆ ಜೀವಾ ಚಿಯರ್ ಅಪ್ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಹಾರ್ದಿಕ್ ಜತೆಗೆ ಜೀವಾ ಬಸ್ ರೈಡ್ ಮಾಡುವ ಫೋಟೋ ವೈರಲ್ ಆಗಿದೆ.

ಆಟಿಕೆ ಬಸ್ ಒಂದರಲ್ಲಿ ಜೀವಾ ಡ್ರೈವರ್ ಸೀಟ್ ನಲ್ಲಿ ಕುಳಿತಿದ್ದರೆ ಹಾರ್ದಿಕ್ ಪ್ರಯಾಣಿಕರ ಸೀಟ್ ನಲ್ಲಿ ಕುಳಿತು ಮಜಾ ಮಾಡುತ್ತಿರುವ ಫೋಟೋ ಇನ್ ಸ್ಟಾಗ್ರಾಂನಲ್ಲಿ ಹರಿದಾಡುತ್ತಿದೆ. ಅಂತೂ ಜೀವಾ ಅಪ್ಪನ ಜತೆಗೆ ಇಂಗ್ಲೆಂಡ್ ನಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ