ಭಾರತ-ಪಾಕಿಸ್ತಾನ ಕಾದಾಡುವುದು ಕ್ರಿಕೆಟ್ ದೊರೆಗಳಿಗೆ ಇಷ್ಟವಾಗ್ತಿಲ್ಲ

ಶುಕ್ರವಾರ, 15 ಸೆಪ್ಟಂಬರ್ 2017 (08:33 IST)
ದುಬೈ: ತನ್ನ ಸದಸ್ಯ ರಾಷ್ಟ್ರಗಳಾದ ಭಾರತ-ಪಾಕಿಸ್ತಾನ ಪರಸ್ಪರ ಕಿತ್ತಾಡಿಕೊಂಡಿರುವುದನ್ನು ನೋಡಲಾಗುತ್ತಿಲ್ಲ ಎಂದು ಐಸಿಸಿ ಹೇಳಿಕೊಂಡಿದೆ.

 
ತನ್ನ ಸದಸ್ಯ ರಾಷ್ಟ್ರಗಳು ಅದರಲ್ಲೂ ವಿಶೇಷವಾಗಿ ಭಾರತ –ಪಾಕಿಸ್ತಾನದ ನಡುವೆ ಪರಸ್ಪರ ಗಡಿ ಭಿನ್ನಾಭಿಪ್ರಾಯಗಳಿರುವುದರಿಂದ ಕ್ರೀಡೆ ಮೇಲೆ ಪರಿಣಾಮ ಬೀರುತ್ತಿದೆ ಎನ್ನುವುದು ಐಸಿಸಿ ಅಳಲು.

ಭಾರತ ತಮ್ಮೊಂದಿಗೆ ಈ ಮೊದಲು ಒಪ್ಪಂದವಾದ ಕ್ರಿಕೆಟ್ ಸರಣಿ ಆಡಲು ಒಪ್ಪುತ್ತಿಲ್ಲ ಎಂದು ಪಾಕ್ ಕ್ರಿಕೆಟ್ ನಿಯಂತ್ರಣ ಮಂಡಳಿ ದೂರು ನೀಡಿತ್ತು. ಈ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿರುವ ಐಸಿಸಿ ‘ಸರ್ಕಾರದಿಂದ ಅನುಮತಿ ಸಿಗದ ಹೊರತು ಬಿಸಿಸಿಐ ಸರಣಿ ಆಡಲು ಒಪ್ಪಲ್ಲ. ಈ ಸಮಸ್ಯೆ ಆದಷ್ಟು ಬೇಗ ಬಗೆಹರಿಯಲಿ. ಸದಸ್ಯ ರಾಷ್ಟ್ರಗಳು ಕಚ್ಚಾಡುತ್ತಿರುವುದನ್ನು ನೋಡಲಾಗದು’ ಎಂದು ಐಸಿಸಿ ಹೇಳಿದೆ.

ಇದನ್ನೂ ಓದಿ.. ಬಿಗ್ ಬಾಸ್ 5 ಪ್ರೋಮೋ ನೋಡಿ ಜಗ್ಗೇಶ್ ಫುಲ್ ಖುಷ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ