IND vs AUS: ನಥನ್ ಲಿಯೋನ್ ಗಿಂತಲೂ ಕಡೆಯಾಗಿ ಹೋದ್ಯಲ್ಲೋ ರೋಹಿತ್ ಶರ್ಮಾ

Krishnaveni K

ಸೋಮವಾರ, 30 ಡಿಸೆಂಬರ್ 2024 (10:58 IST)
ಆದರೂ ರೋಹಿತ್ ನಸೀಬು ಬದಲಾಗಿಲ್ಲ. ಈ ಪಂದ್ಯದ ಎರಡೂ ಇನಿಂಗ್ಸ್ ಗಳಲ್ಲೂ ಅವರು ಮತ್ತೆ ವೈಫಲ್ಯ ಅನುಭವಿಸಿದ್ದಾರೆ. ಇದರ ಬೆನ್ನಲ್ಲೇ ಅಭಿಮಾನಿಗಳ ಆಕ್ರೋಶದ ಕಟ್ಟೆಯೊಡೆದಿದೆ. ಆಸೀಸ್ ಬೌಲರ್ ನಥನ್ ಲಿಯೋನ್ ಕೂಡಾ ನಿಮಗಿಂತ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಾರೆ. ನೀವು ಲಿಯೋನ್ ಗಿಂತಲೂ ಕಡೆಯಾಗಿ ಹೋದಿರಲ್ಲಾ ಎಂದು ರೋಹಿತ್ ರನ್ನು ಟೀಕಿಸುತ್ತಿದ್ದಾರೆ.

ರೋಹಿತ್ ರಿಂದಾಗಿ ರಾಹುಲ್ ಕೂಡಾ ಓಪನರ್ ಸ್ಥಾನ ಕಳೆದುಕೊಂಡರು. ಇದರಿಂದ ಅವರ ಆಟವೂ ಕಳೆಗುಂದಿದೆ. ಒಟ್ಟಾರೆಯಾಗಿ ರೋಹಿತ್ ಮತ್ತು ಕೊಹ್ಲಿಯಿಂದಾಗಿ ಇಡೀ  ಭಾರತದ ಬ್ಯಾಟಿಂಗ್ ಕಳೆಗುಂದಿಂತಾಗಿದೆ. ಇನ್ನು ಇಬ್ಬರೂ ನಿವೃತ್ತಿಯಾಗಬೇಕು ಎಂದು ನೆಟ್ಟಿಗರು ಅಭಿಯಾನವನ್ನೇ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ