IND vs ENG test: ಭವಿಷ್ಯ ನುಡಿದ ಧ್ರು ವ್ ಜುರೆಲ್, ಮುಂದಿನ ಎಸೆತಕ್ಕೇ ಒಲಿ ಪಾಪ್ ಔಟ್!

Krishnaveni K

ಗುರುವಾರ, 7 ಮಾರ್ಚ್ 2024 (12:27 IST)
Photo Courtesy: Twitter
ಧರ್ಮಶಾಲಾ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ಮೊದಲ ದಿನ ಇಂಗ್ಲೆಂಡ್ ಇತ್ತೀಚೆಗಿನ ವರದಿ ಬಂದಾಗ 2 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಭೋಜನ ವಿರಾಮಕ್ಕೆ ಮುನ್ನ ಇಂಗ್ಲೆಂಡ್ ಇನಿಂಗ್ಸ್ 25.3 ನೇ ಓವರ್ ನಲ್ಲಿ ಕುಲದೀಪ್ ಯಾದವ್ ಎಸೆತದಲ್ಲಿ ಇಂಗ್ಲೆಂಡ್ ಬ್ಯಾಟಿಗ ಒಲಿ ಪಾಪ್ ಸ್ಟಂಪ್ ಔಟ್ ಆಗಿ ನಿರ್ಗಮಿಸಿದರು. ಆದರೆ ಇದಕ್ಕೆ ಮೊದಲು ವಿಕೆಟ್ ಕೀಪರ್ ಧ್ರುವ್ ಜುರೆಲ್ ಇದನ್ನು ಮೊದಲೇ ಊಹಿಸಿ ಕುಲದೀಪ್‍ ಗೆ ಸೂಚನೆ ನೀಡಿದ್ದರು.

ಈ ಎಸೆತ ಎಸೆಯುವ ಮೊದಲೇ ಒಲಿ ಪಾಪ್ ಕಾಲಿನ ಚಲನೆ ಗಮನಿಸಿದ್ದ ಧ‍್ರುವ್ ಬೌಲಿಂಗ್ ಮಾಡುತ್ತಿದ್ದ ಕುಲದೀಪ್ ಗೆ ‘ಈತ ಮುನ್ನುಗ್ಗಿ ಬಾರಿಸುತ್ತಾನೆ’ ಎಂದು ಎರಡೆರಡು ಬಾರಿ ಹೇಳಿ ಎಚ್ಚರಿಸಿದ್ದರು. ವಿಶೇಷವೆಂದರೆ ಅದರಂತೆಯೇ ಆಯಿತು. ಆ ಎಸೆತದಲ್ಲಿ ಒಲಿ ಪಾಪ್ ಮುನ್ನುಗ್ಗಿ ಬಾರಿಸಲು ಹೊರಟರು. ಅದನ್ನು ಮೊದಲೇ ಊಹಿಸಿದ್ದ ಧ‍್ರುವ್ ಜುರೆಲ್ ಸ್ಟಂಪ್ ಮಾಡಿಯೇ ಬಿಟ್ಟರು. ಧ್ರುವ್ ಜುರೆಲ್ ಗೆ ಕಾಮೆಂಟೇಟರ್ ಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇಂಗ್ಲೆಂಡ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಬೆನ್ ಡಕೆಟ್ 27 ರನ್ ಗಳಿಸಿ ಕುಲದೀಪ್ ಗೆ ವಿಕೆಟ್ ಒಪ್ಪಿಸಿದ್ದರು. ಆದರೆ ಇನ್ನೊಬ್ಬ ಆರಂಭಿಕ ಜಾಕ್ ಕ್ರಾವ್ಲೇ 63 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಇನ್ನು, ಬೆನ್ ಡಕೆಟ್ ವಿಕೆಟ್ ಪಡೆಯಲು ಕುಲದೀಪ್ ಗೆ ನೆರವಾಗಿದ್ದು ಶುಬ್ಮನ್ ಗಿಲ್ ಅವರ ಅದ್ಭುತ ಕ್ಯಾಚ್. ಓಡುತ್ತಾ ಗಿಲ್ ಹಿಡಿದ ಅದ್ಭುತ ಕ್ಯಾಚ್ ನಿಂದ ಭಾರತಕ್ಕೆ ಮೊದಲ ಯಶಸ್ಸು ಸಿಕ್ಕಿತು.  ಇಂದು ಮೊದಲಾರ್ಧದಲ್ಲಿ ಫೀಲ್ಡಿಂಗ್ ನಲ್ಲಿ ಮಿಂಚಿದ ಗಿಲ್ ಮತ್ತು ಧ್ರುವ್ ಇಬ್ಬರೂ ಹೀರೋಗಳಾದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ