India-Australia T20I: ಟಾಸ್ ಗೆದ್ದ ಆಸೀಸ್ ಫೀಲ್ಡಿಂಗ್ ಆಯ್ಕೆ
ಇಂದು ಬೆಂಗಳೂರಿನಲ್ಲಿ ಹನಿ ಮಳೆಯಾಗುತ್ತಿದೆ. ಹಾಗಿದ್ದರೂ ಸದ್ಯಕ್ಕೆ ವರುಣನ ಕೃಪೆ ತೋರಿದ್ದು, ಪಂದ್ಯ ನಡೆಯುವ ನಿರೀಕ್ಷೆಯಿದೆ. ಪಿಚ್ ಬ್ಯಾಟಿಂಗ್ ಗೆ ಸಹಕಾರಿಯಾಗುವ ನಿರೀಕ್ಷೆಯಿದೆ.
ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಏಕೈಕ ಬದಲಾವಣೆ ಮಾಡಿಕೊಂಡಿದೆ. ದೀಪಕ್ ಚಹರ್ ಬದಲಿಗೆ ಅರ್ಷ್ ದೀಪ್ ಸಿಂಗ್ ಆಡುವ ಬಳಗಕ್ಕೆ ಆಯ್ಕೆಯಾಗಿದ್ದಾರೆ. ದೀಪಕ್ ಚಹರ್ ವೈದ್ಯಕೀಯ ಕಾರಣಗಳಿಗೆ ತವರಿಗೆ ಮರಳಿದ್ದಾರೆ ಎಂದು ನಾಯಕ ಸೂರ್ಯಕುಮಾರ್ ಯಾದವ್ ಮಾಹಿತಿ ನೀಡಿದ್ದಾರೆ.
ಅತ್ತ ಆಸ್ಟ್ರೇಲಿಯಾ ಹೇಗಿದ್ದರೂ ಸರಣಿ ಕಳೆದುಕೊಂಡಿದೆ. ಆದರೂ ಆಸೀಸ್ ಒಂದು ಬದಲಾವಣೆ ಮಾಡಿದೆ. ಗ್ರೀನ್ ಸ್ಥಾನಕ್ಕೆ ಎಲ್ಲಿಸ್ ಅವರನ್ನು ಆಯ್ಕೆ ಮಾಡಿಕೊಂಡಿದೆ.