ಬೆಂಗಳೂರಿನಲ್ಲಿ ಮಳೆ: ಇಂದು`ಭಾರತ-ಆಸ್ಟ್ರೇಲಿಯಾ ಪಂದ್ಯ ನಡೆಯುವುದು ಅನುಮಾನ

ಭಾನುವಾರ, 3 ಡಿಸೆಂಬರ್ 2023 (17:22 IST)
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣ, ಹನಿ ಮಳೆಯಾಗುತ್ತಿದ್ದು, ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ನಡೆಯುವುದು ಅನುಮಾನವಾಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ಐದನೇ ಮತ್ತು ಅಂತಿಮ ಟಿ20 ಪಂದ್ಯ ನಡೆಯಬೇಕಿದೆ. ಆದರೆ ಬೆಳಿಗ್ಗೆಯಿಂದಲೇ ಇಲ್ಲಿ ಮಳೆಯ ವಾತಾವರಣವಿದೆ.

ಇದೀಗ ಸಂಜೆ 7 ಗಂಟೆಗೆ ಪಂದ್ಯ ನಿಗದಿಯಾಗಿದೆ. ಆದರೆ ಸಂಜೆಯಾಗುತ್ತಿದ್ದಂತೇ ಮಳೆ ಹನಿ ಜೋರಾಗಿದ್ದು, ಒಂದು ರೀತಿಯ ಚಳಿಯ ವಾತಾವರಣವಿದೆ. ಇಂದು ಪಂದ್ಯ ನಡೆಯುವುದು ಅನುಮಾನವೆನ್ನಲಾಗಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಇದುವರೆಗೆ ನಾಲ್ಕು ಪಂದ್ಯಗಳು ನಡೆದಿದ್ದು, ಭಾರತ 3-1 ರಿಂದ ಮುನ್ನಡೆ ಸಾಧಿಸಿ ಸರಣಿ ಗೆಲುವು ತನ್ನದಾಗಿಸಿಕೊಂಡಿದೆ. ಹೀಗಾಗಿ ಇಂದು ಪಂದ್ಯ ನಡೆಯದೇ ಇದ್ದರೂ ಸರಣಿಯ ಫಲಿತಾಂಶದ ಮೇಲೆ ಪರಿಣಾಮ ಬೀರದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ