India-Australia T20I: ಚಿನ್ನಸ್ವಾಮಿ ಮೈದಾನದಲ್ಲಿ ಟೀಂ ಇಂಡಿಯಾ ರೋಚಕ ಜಯ

ಸೋಮವಾರ, 4 ಡಿಸೆಂಬರ್ 2023 (08:20 IST)
ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟಿ20 ಪಂದ್ಯವನ್ನು ಟೀಂ ಇಂಡಿಯಾ ರೋಚಕವಾಗಿ 6 ರನ್ ಗಳಿಂದ ಗೆದ್ದುಕೊಂಡು ಸರಣಿಯನ್ನು 4-1 ಅಂತರದಿಂದ ಕೈ ವಶ ಮಾಡಿಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತ್ತು. ಈ ಮೊತ್ತ ಬೆನ್ನತ್ತಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 154 ರನ್ ಗಳಿಲಷ್ಟೇ ಶಕ್ತವಾಯಿತು.

ಭಾರತದ ಪರ ಕೊನೆಯ ಓವರ್ ಗಳಲ್ಲಿ ಅರ್ಷ್ ದೀಪ್ ಸಿಂಗ್ ಅದ್ಭುತ ಬೌಲಿಂಗ್ ನಡೆಸಿದರು. ಕೊನೆಯ ಓವರ್ ನಲ್ಲಿ 6 ಎಸೆತಗಳಿಂದ ಆಸೀಸ್ 10 ರನ್ ಗಳಿಸಬೇಕಾಗಿತ್ತು. ಟಿ20 ಜಮಾನಾದಲ್ಲಿ ಈ ಗುರಿ ದೊಡ್ಡದೇನಾಗಿರಲಿಲ್ಲ. ಆದರೆ ಅದ್ಭುತ ಯಾರ್ಕರ್ ಗಳ ಮೂಲಕ ಅರ್ಷ್ ದೀಪ್ ಸಿಂಗ್ ಎದುರಾಳಿಗಳಿಗೆ ಒಂದೇ ಒಂದು ಬೌಂಡರಿ ಕೂಡಾ ಬಿಟ್ಟುಕೊಡದೇ ಕಟ್ಟಿ ಹಾಕಿದರು. ಜೊತೆಗೆ ಮೂರನೇ ಎಸೆತದಲ್ಲಿ ಆಸೀಸ್ ನಾಯಕ ಮ್ಯಾಥ್ಯೂ ವೇಡ್ ವಿಕೆಟ್ ಕಬಳಿಸಿದರು. ಕೊನೆಯ ಮೂರು ಎಸೆತಗಳಲ್ಲಿ ಆಸೀಸ್ ಕೇವಲ 3 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದಾಗಿ ಊಹಿಸಿರದ ಸೋಲು ಕಂಡಿತು.

ಆಸೀಸ್ ಪರ ಟ್ರಾವಿಸ್ ಹೆಡ್ 28, ಬೆನ್ ಮೆಕ್ ಡರ್ಮೊಟ್ 54 ರನ್ ಗಳಿಸಿದರು. ಭಾರತದ ಪರ ಮುಕೇಶ್ ಕುಮಾರ್ 3, ಅರ್ಷ್ ದೀಪ್ ಸಿಂಗ್, ರವಿ ಬಿಷ್ಣೋಯ್ ತಲಾ 2, ಅಕ್ಸರ್ ಪಟೇಲ್ 1 ವಿಕೆಟ್ ತಮ್ಮದಾಗಿಸಿಕೊಂಡರು. ಈ ಸರಣಿಯುದ್ದಕ್ಕೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ರಿಂಕು ಸಿಂಗ್ ಸರಣಿ ಶ್ರೇಷ್ಠ, 4 ಓವರ್ ಗಳಲ್ಲಿ ಕೇವಲ 14 ರನ್ ಬಿಟ್ಟುಕೊಟ್ಟು 1 ವಿಕೆಟ್ ಕಬಳಿಸಿದ ಅಕ್ಸರ್ ಪಟೇಲ್ ಪಂದ್ಯ ಶ್ರೇಷ್ಠರಾದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ