ಭಾರತ-ನ್ಯೂಜಿಲೆಂಡ್ ಟೆಸ್ಟ್: ಟೀಂ ಇಂಡಿಯಾ ವಿರುದ್ಧ ಅತಿಥೇಯರ ಪ್ರಾಬಲ್ಯ

ಶನಿವಾರ, 22 ಫೆಬ್ರವರಿ 2020 (09:05 IST)
ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ನ ದ್ವಿತೀಯ ದಿನ ಚಹಾ ವಿರಾಮದ ವೇಳೆಗೆ ನ್ಯೂಜಿಲೆಂಡ್ ಮೊದಲ ಇನಿಂಗ್ಸ್ ನಲ್ಲಿ 2 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿದೆ.


ಪ್ರಥಮ ಇನಿಂಗ್ಸ್ ನಲ್ಲಿ ಭಾರತ 165 ರನ್ ಗಳಿಗೆ ಆಲೌಟ್ ಆಗಿತ್ತು. ನಿನ್ನೆ ಅಜೇಯರಾಗಿದ್ದ ಅಜಿಂಕ್ಯಾ ರೆಹಾನೆ 46 ರನ್ ಗೆ ಔಟಾದರೆ ರಿಷಬ್ ಪಂತ್ 19 ರನ್ ಗಳಿಸಿ ಔಟಾದರು. ಮೊಹಮ್ಮದ್ ಶಮಿ ಬಿರುಸಿನ 21 ರನ್ ಗಳಿಸಿದರು. ಇವರನ್ನು ಬಿಟ್ಟರೆ ಉಳಿದವರದ್ದು ಏಕಂಕಿ ಸಾಧನೆ.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಟಾಮ್ ಲಥಮ್ ರನ್ನು (11) ಬೇಗನೇ ಕಳೆದುಕೊಂಡಿತಾದರೂ ಟಾಮ್ ಬ್ಲಂಡೆಲ್ 30 ರನ್ ಗಳಿಸಿದರು. ಇವೆರಡೂ ವಿಕೆಟ್ ಇಶಾಂತ್ ಶರ್ಮಾ ಪಾಲಾಯಿತು. ಇದೀಗ ಕ್ರೀಸ್ ನಲ್ಲಿ 46 ರನ್ ಗಳಿಸಿದ ಕೇನ್ ವಿಲಿಯಮ್ಸನ್ ಮತ್ತು 22 ರನ್ ಗಳಿಸಿದ ರಾಸ್ ಟೇಲರ್ ಇದ್ದಾರೆ. ನ್ಯೂಜಿಲೆಂಡ್ ಗೆ ಭಾರತದ ಮೊದಲ ಇನಿಂಗ್ಸ್ ಮೊತ್ತವನ್ನು ಹಿಂದಿಕ್ಕಲು ಕೇವಲ 49 ರನ್ ಗಳಿಸಿದರೆ ಸಾಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ