ಭಾರತ-ಪಾಕ್ ಪಂದ್ಯಕ್ಕೆ ಇಂದೂ ಮಳೆ ಕಾಟ?

ಸೋಮವಾರ, 11 ಸೆಪ್ಟಂಬರ್ 2023 (10:06 IST)
ಕೊಲೊಂಬೊ: ಭಾರತ ಮತ್ತು ಪಾಕಿಸ್ತಾನ ನಡುವಿನ ಸೂಪರ್ ಫೋರ್ ಪಂದ್ಯ ನಿನ್ನೆ ದಿನ ಮಳೆಯಿಂದಾಗಿ ನಿಂತಿದ್ದು, ಮೀಸಲು ದಿನವಾದ ಇಂದು ಮುಂದುವರಿಯಲಿದೆ.

ಆದರೆ ಇಂದೂ ಕೂಡಾ ಮಳೆಯಾಗುವ ಸಂಭವವಿದೆ. ಇಂದು ಬೆಳಿಗ್ಗೆಯಿಂದಲೇ ಕೊಲೊಂಬೋದಲ್ಲಿ ಮಳೆಯಾಗುತ್ತಿದೆ. ಹೀಗಾಗಿ ಇಂದೂ ಅಪರಾಹ್ನ ಮೋಡ ಕವಿದ ವಾತಾವರಣ ನಿರೀಕ್ಷಿಸಲಾಗಿದೆ.

ಇಂದೂ ಮಳೆಯಿಂದ ಪಂದ್ಯ ನಡೆಯದೇ ಹೋದರೆ ಎರಡೂ ತಂಡಗಳೂ ತಲಾ 1 ಅಂಕ ಹಂಚಿಕೊಳ್ಳಲಿವೆ. ಭಾರತ ನಾಳೆ ಮತ್ತೆ ಶ್ರೀಲಂಕಾ ವಿರುದ್ಧ ಇದೇ ಮೈದಾನದಲ್ಲಿ ಎರಡನೇ ಪಂದ್ಯವಾಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ