ಭಾರತ-ವೆಸ್ಟ್ ಇಂಡೀಸ್ ಟಿ20 ಸರಣಿಗೆ ಶೇ.75 ಪ್ರೇಕ್ಷಕರ ಹಾಜರಾತಿ

ಬುಧವಾರ, 2 ಫೆಬ್ರವರಿ 2022 (08:50 IST)
ಕೋಲ್ಕೊತ್ತಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯಲಿರುವ ಟಿ20 ಸರಣಿಗೆ ಕೋಲ್ಕೊತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಶೇ.75 ಪ್ರೇಕ್ಷಕರ ಹಾಜರಾತಿಗೆ ಅವಕಾಶವಿದೆ.

ಈಡನ್ ಗಾರ್ಡನ್ ನಲ್ಲಿ ಎಲ್ಲಾ ಮೂರೂ ಟಿ20 ಪಂದ್ಯಗಳು ನಡೆಯಲಿವೆ. ಫೆಬ್ರವರಿ 16 ರಿಂದ ಟಿ20 ಸರಣಿ ನಡೆಯಲಿದೆ. ಸದ್ಯಕ್ಕೆ ಕೊರೋನಾ ನಿರ್ಬಂಧವಿರುವುದರಿಂದ ಮೈದಾನ ಭರ್ತಿಗೆ ಅವಕಾಶವಿಲ್ಲ.

ಹೀಗಾಗಿ ಶೆ.75 ಪ್ರೇಕ್ಷಕರ ಹಾಜರಾತಿಗೆ ಅವಕಾಶ ನೀಡುವುದಾಗಿ ಪಶ್ಚಿಮ ಬಂಗಾಲ ಸರ್ಕಾರ ಹೇಳಿದೆ. ಹೀಗಾಗಿ ಟಿ20 ಸರಣಿಗೆ ಸುಮಾರು 50,000 ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ಸಿಗುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ