ಐಪಿಎಲ್ 2023: ಬಾಲ್ಯದ ಕೋಚ್ ಕಾಲಿಗೆ ಬಿದ್ದು ನಮಸ್ಕರಿಸಿದ ಕೊಹ್ಲಿ
ಡೆಲ್ಲಿ ವಿರಾಟ್ ಕೊಹ್ಲಿ ಹುಟ್ಟೂರು. ಹೀಗಾಗಿ ಇಲ್ಲಿ ಕೊಹ್ಲಿಗೆ ಅನೇಕ ನೆನಪುಗಳಿವೆ. ಡೆಲ್ಲಿ-ಬೆಂಗಳೂರು ಪಂದ್ಯಕ್ಕೆ ಮೊದಲು ಕೊಹ್ಲಿ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮಾ ಮೈದಾನಕ್ಕೆ ಆಗಮಿಸಿದ್ದರು.
ಈ ವೇಳೆ ದೂರದಲ್ಲಿ ಅಭ್ಯಾಸ ನಡೆಸುತ್ತಿದ್ದ ಕೊಹ್ಲಿ ಓಡೋಡಿ ತಮ್ಮ ಕೋಚ್ ಬಳಿಗೆ ಬಂದು ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು. ಬಳಿಕ ಕೋಚ್ ಕುಶಲೋಪರಿ ವಿಚಾರಿಸಿದರು. ಈ ಮೂಲಕ ತಾವು ಎಷ್ಟೇ ದೊಡ್ಡ ಕ್ರಿಕೆಟಿಗನಾಗಿದ್ದರೂ ಬಾಲ್ಯದಲ್ಲಿ ಕಲಿಸಿದ್ದ ಟೀಚರ್ ಗೆ ವಂದಿಸುವ ಮೂಲಕ ತಮ್ಮ ಸಂಸ್ಕಾರ ಎಂತಹದ್ದು ಎಂದು ಕೊಹ್ಲಿ ತೋರಿಸಿಕೊಟ್ಟರು.