Photo Credit: Twitter
ಲಕ್ನೋ: ಐಪಿಎಲ್ 2024 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕೋಲ್ಕೊತ್ತಾ ನೈಟ್ ರೈಡರ್ಸ್ 98 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಕೆಕೆಆರ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿತು.ಸುನಿಲ್ ನರೈನ್ ಕೇವಲ 39 ಎಸೆತಗಳಲ್ಲಿ 80, ಸಾಲ್ಟ್ 32, ರಘುವಂಶಿ 32, ಶ್ರೇಯಸ್ ಅಯ್ಯರ್ 25 ರನ್ ಗಳಿಸಿದರು. ನವೀನ್ ಉಲ್ ಹಕ್ 3 ಕಬಳಿಸಿದರು. ಉಳಿದಂತೆ ಯಶ್ ಠಾಕೂರ್, ರವಿ ಬಿಷ್ಣೋಯ್, ಯಧುವೀರ್ ಸಿಂಗ್ ತಲಾ 1 ವಿಕೆಟ್ ಕಬಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 16.1 ಓವರ್ ಗಳಲ್ಲಿ 137 ರನ್ ಗಳಿಗೆ ಆಲೌಟ್ ಆಯಿತು. ಕೆಎಲ್ ರಾಹುಲ್ 25, ಮಾರ್ಕಸ್ ಸ್ಟಾಯ್ನಿಸ್ 36 ರನ್ ಗಳಿಸಿದ್ದು ಬಿಟ್ಟರೆ ಉಳಿದವರು 20 ರ ಗಡಿಯನ್ನೂ ದಾಟಲಿಲ್ಲ. ಬ್ಯಾಟಿಂಗ್ ವೈಫಲ್ಯಕ್ಕೆ ಲಕ್ನೋ ತಕ್ಕ ಬೆಲೆ ತೆತ್ತಿತು.
ಇದೀಗ ಈ ಸೋಲಿನೊಂದಿಗೆ ಲಕ್ನೋ ಅಂಕಪಟ್ಟಿಯಲ್ಲಿ 5 ನೇ ಸ್ಥಾನಕ್ಕೆ ಜಾರಿದೆ. ನಿರ್ಣಾಯಕ ಹಂತದಲ್ಲಿ ಈ ಸೋಲು ಲಕ್ನೋ ಪಾಲಿಗೆ ದುಬಾರಿಯಾಯಿತು. 11 ಪಂದ್ಯಗಳಿಂದ 6 ಗೆಲುವು, 5 ಸೋಲು ಕಂಡಿರುವ ಇದೀಗ ಉಳಿದೆಲ್ಲಾ ಪಂದ್ಯವನ್ನು ಗೆಲ್ಲುವ ಅನಿವಾರ್ಯತೆಗೆ ಸಿಲುಕಿದೆ.