IPL 2025: ಆರ್ ಸಿಬಿ ಪಂದ್ಯಗಳ ಟಿಕೆಟ್ ಬೆಲೆ ಬಲು ದುಬಾರಿ: ಬುಕಿಂಗ್ ಎಲ್ಲಿ ಮಾಡಬೇಕು ನೋಡಿ

Krishnaveni K

ಬುಧವಾರ, 19 ಮಾರ್ಚ್ 2025 (16:00 IST)
Photo Credit: Instagram
ಬೆಂಗಳೂರು: ಐಪಿಎಲ್ 2025 ಆರಂಭಕ್ಕೆ ಕೆಲವೇ ಕ್ಷಣಗಳು ಬಾಕಿಯಿದ್ದು, ಬೆಂಗಳೂರಿನಲ್ಲಿ ನಡೆಯಲಿರುವ ಆರ್ ಸಿಬಿ ಪಂದ್ಯದ ಟಿಕೆಟ್ ಬಲು ದುಬಾರಿಯಾಗಿದೆ. ಟಿಕೆಟ್ ಖರೀದಿಸಲು ಏನು ಮಾಡಬೇಕು ಇಲ್ಲಿ ನೋಡಿ.

ಐಪಿಎಲ್ 2025 ಆರಂಭಕ್ಕೆ ಮುನ್ನವೇ ಆರ್ ಸಿಬಿ ಪಂದ್ಯಗಳ ಟಿಕೆಟ್ ಗೆ ಭಾರೀ ಡಿಮ್ಯಾಂಡ್ ಬಂದಿದೆ. ಎಲ್ಲಿ ಬುಕಿಂಗ್ ಮಾಡಬೇಕು ಎಂದು ಹಲವರು ಆನ್ ಲೈನ್ ನಲ್ಲಿ ತಡಕಾಡುತ್ತಿದ್ದಾರೆ. ಬುಕ್ ಮೈ ಶೋ, ಪೇಟಿಎಂ ಮೂಲಕ ಬುಕಿಂಗ್ ಗೆ ಪ್ರಯತ್ನ ಮಾಡಿ ಸೋತಿದ್ದಾರೆ.

ಕೆಲವರು ಎಷ್ಟು ಬೆಲೆಯಾದರೂ ಸರಿ, ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡಲೇಬೇಕು ಎಂದು ದುಬಾರಿ ಬೆಲೆ ತೆತ್ತಾದರೂ ಟಿಕೆಟ್ ಖರೀದಿಗೆ ಮುಂದಾಗಿದ್ದಾರೆ. ಆನ್ ಲೈನ್ ಮೂಲಕ ಟಿಕೆಟ್ ಆರಂಭಿಕ ಬೆಲೆಯೇ 2,500 ರೂ.ಗಳಷ್ಟಿದೆ.

ಚಿನ್ನಸ್ವಾಮಿ ಮೈದಾನದಲ್ಲಿ ಏಪ್ರಿಲ್ 2 ರಂದು ಗುಜರಾತ್ ಟೈಟನ್ಸ್ ವಿರುದ್ಧ ಆರ್ ಸಿಬಿ ಮೊದಲ ಪಂದ್ಯವಾಡಲಿದೆ. ಈ ಪಂದ್ಯದ ಆನ್ ಲೈನ್ ಟಿಕೆಟ್ ಆರಂಭಿಕ ಬೆಲೆ ಈಗ 2,3000 ರೂ. ನಿಂದ ಪ್ರಾರಂಭವಾಗುತ್ತಿದೆ. ಈಗಾಗಲೇ ಹಲವು ಸ್ಟ್ಯಾಂಡ್ ಗಳ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ. ಟಿಕೆಟ್ ಖರೀದಿ ಮಾಡಬೇಕಾದರೆ https://t.co/IJj3EIh7kP ಈ ಲಿಂಕ್ ಅಥವಾ ರಾಯಲ್  ಚಾಲೆಂಜರ್ಸ್ ಬೆಂಗಳೂರು ಅಧಿಕೃತ ವೆಬ್ ಸೈಟ್ ಗೆ ತೆರಳಿ ಬುಕಿಂಗ್ ಮಾಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ