8 ವರ್ಷಗಳ ಬಳಿಕ ಟೀಂ ಇಂಡಿಯಾಕ್ಕೆ ಆಯ್ಕೆಯಾಗುತ್ತಾರಾ ಕರುಣ್ ನಾಯರ್

Krishnaveni K

ಸೋಮವಾರ, 13 ಜನವರಿ 2025 (11:49 IST)
Photo Credit: X
ಮುಂಬೈ: ಟೆಸ್ಟ್ ಕ್ರಿಕೆಟ್ ನಲ್ಲಿ ತ್ರಿಶತಕ ಸಿಡಿಸಿದ್ದ ಕರುಣ್ ನಾಯರ್ 8 ವರ್ಷಗಳ ಬಳಿಕ ಈಗ ಟೀಂ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ಸೂಚನೆ ನೀಡಿದ್ದಾರೆ.

ವಿದರ್ಭ ಪರ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರುನ್ ನಾಯರ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಬಾರಿ ಇದುವರೆಗೆ ಅವರು ಐದು ಶತಕ ಬಾರಿಸಿದ್ದು ಇದುವರೆಗೆ ಒಮ್ಮೆಯೂ ಔಟಾಗಿಲ್ಲ. ಅವರ ಸಾಹಸದಿಂದ ಸೆಮಿಫೈನಲ್ ಗೆ ತಲುಪಿದೆ.

ಕರುಣ್ ನಾಯರ್ ಭರ್ಜರಿ ಬ್ಯಾಟಿಂಗ್ ಈಗ ಆಯ್ಕೆಗಾರರ ಗಮನ ಸೆಳೆದಿದೆ. ಸದ್ಯಕ್ಕೆ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯದಿಂದಾಗಿ ಸತತವಾಗಿ ಸೋಲು ಕಾಣುತ್ತಿದೆ. ಹೀಗಾಗಿ ತಂಡದ ಹಿರಿಯ ಆಟಗಾರರಿಗೆ ಕೊಕ್ ಕೊಟ್ಟು ಕಿರಿಯರಿಗೆ ಅವಕಾಶ ನೀಡುವ ಬಗ್ಗೆ ಚಿಂತನೆಗಳು ನಡೆದಿವೆ.

ಪರಿವರ್ತನೆಯ ಕಾಲದಲ್ಲಿ ಟೀಂ ಇಂಡಿಯಾದಲ್ಲಿ ಕರುಣ್ ನಾಯರ್ ಗೂ ಅವಕಾಶ ಸಿಗಬಹುದು ಎಂದು ವರದಿಯಾಗುತ್ತಿದೆ. ಹೀಗಾದಲ್ಲಿ ಕರುಣ್ ಬರೋಬ್ಬರಿ 8 ವರ್ಷಗಳ ಬಳಿಕ ಟೀಂ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ