ಬೆಂಗಳೂರು ನನ್ನೂರು, ಕನ್ನಡ ನನ್ನ ಭಾಷೆ: ಕೆಎಲ್ ರಾಹುಲ್ ಮಾತಿಗೆ ಫ್ಯಾನ್ಸ್ ಫುಲ್ ಖುಷ್

Krishnaveni K

ಬುಧವಾರ, 13 ನವೆಂಬರ್ 2024 (10:14 IST)
ಬೆಂಗಳೂರು: ಲಕ್ನೋ ಸೂಪರ್ ಜೈಂಟ್ಸ್ ತೊರೆದು ಈ ಬಾರಿ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಳ್ಳುವ ಸೂಚನೆಯನ್ನು ಕನ್ನಡಿಗ ಕೆಎಲ್ ರಾಹುಲ್ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ ಅವರು ಬೆಂಗಳೂರು ನನ್ನ ಊರು, ನಾನು ಕನ್ನಡಿಗ ಎಂದಿದ್ದಾರೆ. ಅವರ ಈ ಮಾತುಗಳನ್ನು ಕೇಳುತ್ತಿದ್ದರೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಳ್ಳುವುದು ಬಹುತೇಕ ಖಚಿತ ಎನ್ನಬಹುದು. ಅಭಿಮಾನಿಗಳೂ ರಾಹುಲ್ ಮಾತಿನಿಂದ ಖುಷಿಯಾಗಿದ್ದಾರೆ.

ಕೆಎಲ್ ರಾಹುಲ್ ಈ ಬಾರಿ ಐಪಿಎಲ್ ಹರಾಜಿಗಿಳಿಯುವುದು ಖಚಿತವಾಗಿದೆ. ಆರ್ ಸಿಬಿ ತಂಡವನ್ನು ಮತ್ತೆ ಸೇರಿಕೊಳ್ಳುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆರ್ ಸಿಬಿಯಲ್ಲಿದ್ದಾಗ ನಾನು ಸಾಕಷ್ಟು ಎಂಜಾಯ್ ಮಾಡಿದ್ದೆ. ಬೆಂಗಳೂರು ನನ್ನ ತವರೂರು. ಅಭಿಮಾನಿಗಳೂ ನನ್ನನ್ನು ಕನ್ನಡದ ಹುಡುಗ ಎಂದೇ ಕರೆಯುತ್ತಾರೆ. ಈ ಕಾರಣಕ್ಕೆ ಬೆಂಗಳೂರು ಪರ ಕಣಕ್ಕಿಳಿಯುವುದು ವಿಶೇಷವಾಗಿತ್ತು ಎಂದಿದ್ದಾರೆ.

ಈ ಬಾರಿ ಆರ್ ಸಿಬಿಗೂ ರಾಹುಲ್ ಆವಶ್ಯಕತೆಯಿದೆ. ಒಬ್ಬ ವಿಕೆಟ್ ಕೀಪರ್ ಬ್ಯಾಟಿಗ ಪ್ಲಸ್ ನಾಯಕನಾಗಬಲ್ಲ ಆಟಗಾರ ಆರ್ ಸಿಬಿಗೆ ಬೇಕು. ಹೀಗಾಗಿ ಈ ಬಾರಿ ರಾಹುಲ್ ರನ್ನು ಆರ್ ಸಿಬಿ ಖರೀದಿಸಬಹುದು ಎಂದೇ ಅಭಿಮಾನಿಗಳ ನಿರೀಕ್ಷೆ. ಈಗ ರಾಹುಲ್ ಕೂಡಾ ಈ ಮಾತು ಹೇಳಿರುವುದರಿಂದ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ