ರೋಹಿತ್-ವಿರಾಟ್ ಅಪ್ಪುಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್!

ಬುಧವಾರ, 13 ಸೆಪ್ಟಂಬರ್ 2023 (15:59 IST)
Photo Courtesy: Twitter
ಕೊಲೊಂಬೊ: ಶ್ರೀಲಂಕಾ ವಿರುದ್ಧದ ಏಷ್ಯಾ ಕಪ್ ಸೂಪರ್ ಫೋರ್ ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪರಸ್ಪರ ಅಪ್ಪಿಕೊಂಡ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.

ಶ್ರೀಲಂಕಾ ನಾಯಕ ದಸನು ಶಣಕ ನೀಡಿದ ಕಠಿಣ ಕ್ಯಾಚ್ ನ್ನು ರೋಹಿತ್ ಸ್ಲಿಪ್ ನಲ್ಲಿ ಅದ್ಭುತವಾಗಿ ಹಿಡಿದು ಪಂದ್ಯಕ್ಕೆ ತಿರುವು ನೀಡಿದ್ದರು. ಈ ಕ್ಯಾಚ್ ಹಿಡಿದ ತಕ್ಷಣ ರೋಹಿತ್ ಖುಷಿಯಿಂದ ಅಬ್ಬರಿಸುತ್ತಿದ್ದರೆ ಓಡೋಡಿ ಬಂದ ವಿರಾಟ್ ಕೊಹ್ಲಿ ಕುಳಿತಿದ್ದ ರೋಹಿತ್ ರನ್ನು ತಬ್ಬಿ ಸಂಭ್ರಮಿಸಿದರು.

ಇಬ್ಬರು ಸ್ಟಾರ್ ಕ್ರಿಕೆಟಿಗರ ನಡುವೆ ಶೀತಲ ಸಮರ ನಡೆಯುತ್ತಿದೆ ಎಂಬಿತ್ಯಾದಿ ಸುದ್ದಿಗಳು ಆಗಾಗ ಓಡಾಡುತ್ತವೆ. ಅಲ್ಲದೆ, ಇಬ್ಬರ ಅಭಿಮಾನಿಗಳೂ ಸೋಷಿಯಲ್ ಮೀಡಿಯಾದಲ್ಲಿ ಕಿತ್ತಾಡುತ್ತಲೇ ಇರುತ್ತಾರೆ. ಆದರೆ ಈ ಇಬ್ಬರೂ ದಿಗ್ಗಜರೂ ಅದೆಲ್ಲವನ್ನೂ ಸುಳ್ಳು ಮಾಡಿ ಸಂಭ್ರಮಿಸಿದ ಪರಿ ನೋಡಿ ನೆಟ್ಟಿಗರು ಹಲವು ಮೆಮೆಗಳ ಮೂಲಕ ಟ್ರೆಂಡ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ