ಐಸಿಸಿ ತಿಂಗಳ ಆಟಗಾರ ರೇಸ್ ನಲ್ಲಿ ಮಯಾಂಕ್ ಅಗರ್ವಾಲ್
ಡಿಸೆಂಬರ್ ತಿಂಗಳ ಪ್ರದರ್ಶನ ಆಧರಿಸಿ ಮಯಾಂಕ್, ನ್ಯೂಜಿಲೆಂಡ್ ಬೌಲರ್ ಅಜಾಜ್ ಪಟೇಲ್, ಮಿಚೆಲ್ ಸ್ಟಾರ್ಕ್ ಹೆಸರು ನಾಮನಿರ್ದೇಶನಗೊಂಡಿದೆ. ಮಯಾಂಕ್ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶತಕ ಗಳಿಸಿ ಮಿಂಚಿದ್ದರೆ ಅದೇ ಸರಣಿಯಲ್ಲಿ ಅಜಾಜ್ ಪಟೇಲ್ ಇನಿಂಗ್ಸ್ ನ ಎಲ್ಲಾ 10 ವಿಕೆಟ್ ಪಡೆದ ಐತಿಹಾಸಿಕ ಸಾಧನೆ ಮಾಡಿದ್ದರು.
ಇನ್ನು, ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಇಂಗ್ಲೆಂಡ್ ವಿರುದ್ಧ ಆಶಸ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅತ್ಯುತ್ತಮ ಸಾಧನೆಗೈದವರನ್ನು ಆಯ್ಕೆ ಮಾಡಿ ಐಸಿಸಿ ಪ್ರಶಸ್ತಿ ನೀಡಲಿದೆ.