ಟಿ20 ವಿಶ್ವಚಾಂಪಿಯನ್ ಆಗಿ ಪತ್ನಿಯ ಜೊತೆ ಸಾಧನೆ ಸರಿಗಟ್ಟಿದ ಆಸೀಸ್ ಕ್ರಿಕೆಟಿಗ ಮಿಚೆಲ್ ಸ್ಟಾರ್ಕ್
ಮಿಚೆಲ್ ಪತ್ನಿ ಅಲಿಸಾ ಹೀಲೇ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಸದಸ್ಯೆ. ಈ ಹಿಂದೆ ಅವರೂ ಟಿ20 ಮಹಿಳಾ ವಿಶ್ವಕಪ್ ವಿಜೇತ ತಂಡದ ಸದಸ್ಯೆಯಾಗಿದ್ದರು. ಇದೀಗ ಸ್ಟಾರ್ಕ್ ಕೂಡಾ ಪುರುಷರ ತಂಡದ ಮೂಲಕ ವಿಶ್ವ ವಿಜೇತ ತಂಡದ ಸದಸ್ಯರಾಗಿದ್ದಾರೆ.
ಈ ಮೂಲಕ ಗಂಡ-ಹೆಂಡತಿ ಇಬ್ಬರೂ ಟಿ20 ವಿಶ್ವಕಪ್ ಚಾಂಪಿಯನ್ ಎಂಬ ವಿನೂತನ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾ ಮಹಿಳಾ ತಂಡ 2015 ರಲ್ಲಿ ಈ ಸಾಧನೆ ಮಾಡಿತ್ತು.