ಫೆಬ್ರವರಿ 13 ಕ್ಕೂ ಆರ್ ಸಿಬಿಗೂ ಇದೆ ವಿಶೇಷ ಕನೆಕ್ಷನ್: ಇಲ್ಲಿದೆ ನೋಡಿ ಡೀಟೈಲ್ಸ್
ಕಳೆದ ಆವೃತ್ತಿಯವರೆಗೆ ಫಾ ಡು ಪ್ಲೆಸಿಸ್ ತಂಡದ ನಾಯಕರಾಗಿದ್ದರು. ಈ ಆವೃತ್ತಿಗೆ ಆರ್ ಸಿಬಿ ಅವರನ್ನು ತಂಡದಿಂದ ಕೈ ಬಿಟ್ಟಿದೆ. ಹೀಗಾಗಿ ಯಾರು ಹೊಸ ನಾಯಕ ಎಂಬ ಕುತೂಹಲ ಅಭಿಮಾನಿಗಳಿಗಿತ್ತು. ಅದಕ್ಕೆ ನಿನ್ನೆ ಉತ್ತರ ಸಿಕ್ಕಿದೆ.
ತಂಡದ ನೂತನ ನಾಯಕನಾಗಿ ರಜತ್ ಪಾಟಿದಾರ್ ರನ್ನು ಆಯ್ಕೆ ಮಾಡುತ್ತಿದ್ದಂತೇ ಆರ್ ಸಿಬಿಯ ಫೆಬ್ರವರಿ 13 ರ ಕನೆಕ್ಷನ್ ಬಯಲಾಗಿದೆ. ಫೆಬ್ರವರಿ 13 ಅಂದರೆ ನಿನ್ನೆ ರಜತ್ ಹೊಸ ನಾಯಕನಾಗಿ ನೇಮಕವಾಗಿದ್ದಾರೆ.
ವಿಶೇಷವೆಂದರೆ ಮಹಿಳೆಯರ ತಂಡದ ನಾಯಕಿ ಸ್ಮೃತಿ ಮಂಧನರನ್ನೂ ಇದೇ ದಿನ ತಂಡಕ್ಕೆ ಸೇರಿಸಲಾಗಿತ್ತು. ಹೀಗಾಗಿ ಆರ್ ಸಿಬಿ ಮತ್ತು ಫೆಬ್ರವರಿ 13 ಅಂದರೆ ಏನೋ ವಿಶೇಷ ಸಂಬಂಧವಿದೆ ಎಂದು ಫ್ಯಾನ್ಸ್ ಮಾತನಾಡಿಕೊಳ್ಳುವಂತಾಗಿದೆ.