ಮುಂಬೈ: ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ತನ್ನ ಖಾಯಂ ನಾಯಕ ರೋಹಿತ್ ಶರ್ಮಾರನ್ನು ಕಿತ್ತು ಹಾಕಿ ಹಾರ್ದಿಕ್ ಪಾಂಡ್ಯರನ್ನು ನೇಮಿಸಿದ್ದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅದರೆ ರೋಹಿತ್ ಮತ್ತೆ ಐಪಿಎಲ್ ತಂಡದ ನಾಯಕರಾಗಬಹುದು! ಹೇಗೆ ಅಂತೀರಾ?
ಐಪಿಎಲ್ 2025 ರ ವೇಳೆಗೆ ಮತ್ತೊಮ್ಮೆ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ವೇಳೆ ಹೆಚ್ಚಿನ ಆಟಗಾರರೂ ಹರಾಜಿಗೊಳಪಡಲಿದ್ದಾರೆ. ಈ ವೇಳೆ ರೋಹಿತ್ ಶರ್ಮಾ ಕೂಡಾ ಹರಾಜಿಗೊಳಪಡಬಹುದು. ಮುಂಬೈ ತಂಡ ಅವರನ್ನು ಬಿಟ್ಟುಕೊಟ್ಟರೆ ಅಥವಾ ಸ್ವತಃ ರೋಹಿತ್ ಬಯಸಿದರೆ ಅವರು ಹರಾಜಿಗೊಳಪಡಬಹುದು.
ಒಂದು ವೇಳೆ ರೋಹಿತ್ ಹರಾಜಿಗೊಳಗಾದರೆ ಅವರನ್ನು ಖಂಡಿತಾ ಖರೀದಿ ಮಾಡಲು ಇತರೆ ಫ್ರಾಂಚೈಸಿಗಳು ಮುಂದೆ ಬರಬಹುದು. ಐಪಿಎಲ್ ನ ಯಶಸ್ವೀ ನಾಯಕ ಎಂಬ ಹೆಗ್ಗಳಿಕೆ ಹೊಂದಿರುವ ರೋಹಿತ್ ತಂಡಕ್ಕೆ ಬಂದರೆ ಯಾವ ಫ್ರಾಂಚೈಸಿ ತಾನೇ ಸುಮ್ಮನೇ ಕೂರಲು ಸಾಧ್ಯ?
ಖಂಡಿತಾ ಅವರು ಹೊಸ ಫ್ರಾಂಚೈಸಿಗೆ ಹೋದರೆ ಮತ್ತೆ ಐಪಿಎಲ್ ತಂಡವೊಂದರ ನಾಯಕನಾಗಬಹುದು. ಇತ್ತೀಚೆಗೆ ಅವರು ಟೀಂ ಇಂಡಿಯಾದಲ್ಲಿ ಪಡೆಯುತ್ತಿರುವ ಯಶಸ್ಸು ನೋಡಿದರೆ ಅವರು ಇನ್ನೂ ಕೆಲವು ಸಮಯ ಕ್ರಿಕೆಟ್ ಆಡುವುದು ಖಂಡಿತಾ. ಹೀಗಾಗಿ ಈ ಐಪಿಎಲ್ ನಲ್ಲಿ ಅನಿವಾರ್ಯವಾಗಿ ಮುಂಬೈ ಜೊತೆಗೇ ಇರಲಿದ್ದಾರೆ. ಆದರೆ ಮುಂದಿನ ಐಪಿಎಲ್ ವೇಳೆಗೆ ಹರಾಜಿಗೊಳಪಟ್ಟರೂ ಅಚ್ಚರಿಯಿಲ್ಲ.