ಪಂದ್ಯದಲ್ಲಿ ಗೆದ್ದ ಹಣವನ್ನು ಶ್ರೀಲಂಕಾ ಮೈದಾನ ಸಿಬ್ಬಂದಿಗಳಿಗೆ ದಾನ ಮಾಡಿದ ರೋಹಿತ್ ಶರ್ಮಾ

ಬುಧವಾರ, 13 ಸೆಪ್ಟಂಬರ್ 2023 (15:45 IST)
Photo Courtesy: Twitter

ಕೊಲೊಂಬೊ: ಮಳೆಯ ನಡುವೆಯೂ ಮೈದಾನವನ್ನು ರಕ್ಷಿಸಿ ಏಷ್ಯಾ ಕಪ್ ಪಂದ್ಯ ಸುಗಮವಾಗಿ ನಡೆಸಿಕೊಡಲು ಶ್ರಮಿಸಿದ ಮೈದಾನ ಸಿಬ್ಬಂದಿಗಳಿಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಕ್ಕ ಉಡುಗೊರೆ ನೀಡಿದ್ದಾರೆ.

ಭಾರತ-ಪಾಕಿಸ್ತಾನ ಪಂದ್ಯ ಮುಗಿದ ಬಳಿಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮೈದಾನ ಸಿಬ್ಬಂದಿಗಳ ಶ್ರಮವನ್ನು ಕೊಂಡಾಡಿದ್ದರು. ಇದು ಇಷ್ಟಕ್ಕೇ ನಿಂತಿಲ್ಲ.

ಪಾಕಿಸ್ತಾನ ವಿರುದ್ಧದ ಪಂದ್ಯದ ಬಳಿಕ ರೋಹಿತ್ ಮೈದಾನ ಸಿಬ್ಬಂದಿಗಳ ಬಳಿ ತೆರಳಿ ಅವರಿಗೆ ಖುದ್ದಾಗಿ ಧನ್ಯವಾದ ಸಲ್ಲಿಸಿದ್ದಲ್ಲದೆ, ಪಂದ್ಯ ಗೆದ್ದಿದ್ದಕ್ಕೆ ತಂಡಕ್ಕೆ ಸಿಕ್ಕ ಚೆಕ್ ನ್ನು ಮೈದಾನ ಸಿಬ್ಬಂದಿಗಳಿಗೆ ಉಡುಗೊರೆಯಾಗಿ ನೀಡಿದ್ದಾರೆ. ರೋಹಿತ್ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ