Rohit Sharma: ಏಯ್ ನಾನು ಔಟಲ್ಲ ಕಣೋ ನಾಟೌಟ್: ಮೈದಾನದಲ್ಲೇ ಜಡೇಜಾಗೆ ಗದರಿದ ರೋಹಿತ್ ಶರ್ಮಾ
ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ ಕೆ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತ ಬೆನ್ನತ್ತಿದ ಮುಂಬೈಗೆ ರೋಹಿತ್ ಶರ್ಮಾ ಅಬ್ಬರದ ಆರಂಭ ನೀಡಿದರು. ರೋಹಿತ್ 45 ಎಸೆತಗಳಲ್ಲಿ ಅಜೇಯ 76 ರನ್ ಸಿಡಿಸಿ ಭರ್ಜರಿ ಬ್ಯಾಟಿಂಗ್ ಮಾಡಿದರು. ಇದರಿಂದಾಗಿ ಮುಂಬೈ 1 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿ 9 ವಿಕೆಟ್ ಗಳ ಭರ್ಜರಿ ಜಯ ಗಳಿಸಿತು.
ಬಹಳ ದಿನಗಳಿಂದ ರೋಹಿತ್ ಬ್ಯಾಟಿಂಗ್ ಗಾಗಿ ಕಾಯುತ್ತಿದ್ದ ಅಭಿಮಾನಿಗಳು ಅವರ ಇಂದಿನ ಇನಿಂಗ್ಸ್ ನೋಡಿ ಹುಚ್ಚೆದ್ದು ಕುಣಿದರು. ಇದರ ನಡುವೆ ಜಡೇಜಾ ಬೌಲಿಂಗ್ ನಲ್ಲಿ ರೋಹಿತ್ ವಿರುದ್ಧ ಎಲ್ ಬಿಡಬ್ಲ್ಯುಗೆ ಮನವಿ ಸಲ್ಲಿಸಲಾಯಿತು.
ಜಡೇಜಾ ಎಲ್ ಬಿಡಬ್ಲ್ಯುಗಾಗಿ ಕೂಗಿದಾಗ ರೋಹಿತ್ ತಮ್ಮದೇ ಶೈಲಿಯಲ್ಲಿ ‘ಅರೇ ನಾನು ಔಟಲ್ಲ, ನಾಟೌಟ್’ ಎಂದು ಗದರಿದರು. ಎಷ್ಟಾದರೂ ರಾಷ್ಟ್ರೀಯ ತಂಡದ ನಾಯಕನಲ್ವೇ? ಇನ್ನು ವಿಕೆಟ್ ಹಿಂದುಗಡೆ ಇದ್ದ ಸಿಎಸ್ ಕೆ ನಾಯಕ ಧೋನಿ ಕೈ ಕಟ್ಟಿ ನಿಂತು ಇವರಿಬ್ಬರ ಕಿತ್ತಾಟವನ್ನುನೋಡುತ್ತಾ ನಿಂತಿದ್ದರು.