IPL 2025: ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಸಪ್ಪೆ ಮುಖಕ್ಕೆ ಹೊಡೆದ ಹಾಗಿತ್ತು ಕೊಹ್ಲಿ ಸೆಲೆಬ್ರೇಷನ್: ವಿಡಿಯೋ

Krishnaveni K

ಮಂಗಳವಾರ, 8 ಏಪ್ರಿಲ್ 2025 (09:47 IST)
Photo Credit: X
ಮುಂಬೈ: ಐಪಿಎಲ್ 2025 ರಲ್ಲಿ ನಿನ್ನೆ ಮುಂಬೈ ಇಂಡಿಯನ್ಸ್ ತಂಡವನ್ನು ಆರ್ ಸಿಬಿ 12 ರನ್ ಗಳಿಂದ ಗೆದ್ದಿದೆ. ಈ ಗೆಲುವಿನ ಬಳಿಕ ಕೊಹ್ಲಿ ಭರ್ಜರಿ ಸಂಭ್ರಮಾಚರಣೆ ಮಾಡುತ್ತಿದ್ದರೆ ಡಗ್ ಔಟ್ ನಲ್ಲಿ ಕೂತಿದ್ದ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಬೇಸರದಲ್ಲಿ ಕೂತು ವೀಕ್ಷಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ 221 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಮುಂಬೈ 209 ರನ್ ಗಳಿಸಲಷ್ಟೇ ಶಕ್ತವಾಯಿತು. ಗೆಲ್ಲುವಂತಹ ಪಂದ್ಯವನ್ನು ಮುಂಬೈ ಇಂಡಿಯನ್ಸ್ ಕೊನೆಯ ಹಂತದಲ್ಲಿ  ವಿಕೆಟ್ ಕಳೆದುಕೊಳ್ಳುವ ಮೂಲಕ ಸೋತಿತು.

ಈ ಸೋಲಿನ ಬಳಿಕ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಸಪ್ಪೆ ಮುಖ ಮಾಡಿಕೊಂಡು ಕೂತಿದ್ದರು. ಈ  ವೇಳೆ ಮೈದಾನದಲ್ಲಿದ್ದ ವಿರಾಟ್ ಕೊಹ್ಲಿ ತಮ್ಮ ಎಂದಿನ ಶೈಲಿಯಲ್ಲಿ ಭಾರೀ ಸೆಲೆಬ್ರೇಷನ್ ಮಾಡುತ್ತಿದ್ದರು.

ಇದನ್ನು ನೋಡಿ ಕೆಲವು ಮುಂಬೈ ಇಂಡಿಯನ್ಸ್ ಅಭಿಮಾನಿಗಳು ರೋಹಿತ್ ಯಾವತ್ತೂ ಕೂಲ್ ಆಗಿರುತ್ತಾರೆ. ಆದರೆ ಕೊಹ್ಲಿ ಸೆಲೆಬ್ರೇಷನ್ ನೋಡಿದ್ರೆ ಎಷ್ಟು ಸ್ವಾರ್ಥಿ ಎನಿಸುತ್ತದೆ ಎಂದಿದ್ದಾರೆ. ಇನ್ನು, ಕೆಲವರು ಇದಲ್ಲವೇ ಪರಿಸ್ಥಿತಿಯ ವ್ಯಂಗ್ಯ ಎಂದರೆ ಎಂದು ಕಾಮೆಂಟ್ ಮಾಡಿದ್ದಾರೆ.

#MIvRCB #RCBvsMI

Middle finger right on the faces of Pandya and Rohit Sharma.

Brutal Virat kohli????????

pic.twitter.com/SoC2xOJyis

— Jitesh (@Chaotic_mind99) April 7, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ