ವಿರಾಟ್ ಕೊಹ್ಲಿ ದಾಖಲೆ ಮುರಿಯಲು ಸಜ್ಜಾಗಿರುವ ರೋಹಿತ್ ಶರ್ಮಾ

ಭಾನುವಾರ, 3 ನವೆಂಬರ್ 2019 (08:57 IST)
ನವದೆಹಲಿ: ದಾಖಲೆ ವಿಚಾರದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಆಗಾಗ ಹಾವು ಏಣಿ ಆಟ ನಡೆಯುತ್ತಲೇ ಇರುತ್ತದೆ. ಇದೀಗ ಕೊಹ್ಲಿ ದಾಖಲೆಯೊಂದನ್ನು ರೋಹಿತ್ ಮುರಿಯಲು ಸಜ್ಜಾಗಿದ್ದಾರೆ.


ಭಾರತ ಮತ್ತು ಬಾಂಗ್ಲಾ ನಡುವೆ ಇಂದು ದೆಹಲಿಯಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದ್ದು, ಈ ವೇಳೆ ರೋಹಿತ್ ಟಿ20 ಮಾದರಿ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಕೊಹ್ಲಿ ದಾಖಲೆಯನ್ನು ಮುರಿಯಲು ಸಜ್ಜಾಗಿದ್ದಾರೆ.

ಈ ಸರಣಿಯಲ್ಲಿ ಕೊಹ್ಲಿ ಆಡದೇ ಇರುವುದರಿಂದ ರೋಹಿತ್ ಗೆ ಅವರನ್ನು ಮೀರಿ ನಡೆಯುವ ಅದೃಷ್ಟ ಎದುರಾಗಿದೆ. ಸದ್ಯಕ್ಕೆ ಕೊಹ್ಲಿ ಟಿ20 ಫಾರ್ಮ್ಯಾಟ್‍ನಲ್ಲಿ 2450 ರನ್ ಗಳಿಸಿ ಅಗ್ರ ಸ್ಥಾನದಲ್ಲಿದ್ದರೆ ರೋಹಿತ್ 2443 ರನ್ ಗಳಿಸಿದ್ದಾರೆ. ಮೊದಲ ಪಂದ್ಯದಲ್ಲೇ ಏಳು ರನ್ ಗಳಿಸಿದರೂ ಕೊಹ್ಲಿಯನ್ನು ಮೀರಿ ರೋಹಿತ್ ಅಗ್ರಸ್ಥಾನಿಯಾಗಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ