ಐಸಿಸಿ ಪ್ರಶಸ್ತಿಗೆ ಶ್ರೇಯಸ್ ಅಯ್ಯರ್, ದೀಪ್ತಿ ಶರ್ಮಾ, ಮಿಥಾಲಿ ರಾಜ್ ನಾಮನಿರ್ದೇಶನ

ಬುಧವಾರ, 9 ಮಾರ್ಚ್ 2022 (16:56 IST)
ದುಬೈ: ಐಸಿಸಿಯ ಫೆಬ್ರವರಿ ತಿಂಗಳ ಮಾಸಿಕ ಪ್ರಶಸ್ತಿಗೆ ಪುರುಷರ ಕ್ರಿಕೆಟಿಗರ ಪೈಕಿ ಶ್ರೇಯಸ್ ಅಯ್ಯರ್, ಮಹಿಳಾ ತಂಡದಿಂದ ಮಿಥಾಲಿ ರಾಜ್, ದೀಪ್ತಿ ಶರ್ಮಾ ನಾಮ ನಿರ್ದೇಶನಗೊಂಡಿದ್ದಾರೆ.

ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಪ್ರತ್ಯೇಕ ವಿಭಾಗದಲ್ಲಿ ಐಸಿಸಿ ಆಯಾ ತಿಂಗಳಲ್ಲಿ ಮಾಡಿದ ಸಾಧನೆ ಗಮನಿಸಿ ಪ್ರಶಸ್ತಿ ನೀಡುತ್ತದೆ. ಫೆಬ್ರವರಿ ತಿಂಗಳ ಪ್ರಶಸ್ತಿಗೆ ಪುರುಷ ಕ್ರಿಕೆಟಿಗರ ವಿಭಾಗದಲ್ಲಿ ಭಾರತೀಯ ಆಟಗಾರರಾದ ಶ್ರೇಯಸ್ ಅಯ್ಯರ್, ಮಹಿಳೆಯರ ವಿಭಾಗದಲ್ಲಿ ಮಿಥಾಲಿ ರಾಜ್, ದೀಪ್ತಿ ಶರ್ಮಾ ನಾಮನಿರ್ದೇಶನಗೊಂಡಿದ್ದಾರೆ.

ಶ್ರೇಯಸ್ ಕಳೆದ ತಿಂಗಳು ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ರನ್ ಹೊಳೆ ಹರಿಸಿದ್ದರು. ದೀಪ್ತಿ ಶರ್ಮಾ ಮತ್ತು ಮಿಥಾಲಿ ರಾಜ್ ನ್ಯೂಜಿಲೆಂಡ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ