ಟೀಕೆಗಳ ಬೆನ್ನಲ್ಲೇ ಎಚ್ಚೆತ್ತುಕೊಂಡ ಗಂಗೂಲಿ: ಮಹಿಳೆಯರಿಗೂ ಐಪಿಎಲ್ ಶುರು

ಸೋಮವಾರ, 3 ಆಗಸ್ಟ್ 2020 (11:11 IST)
ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೇವಲ ಪುರುಷರ ಕ್ರಿಕೆಟ್ ನ್ನು ಮಾತ್ರ ಪ್ರೋತ್ಸಾಹಿಸುತ್ತಿದೆ ಎಂಬ ಟೀಕೆಗಳ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಹಿಳೆಯರಿಗೂ ಐಪಿಎಲ್ ಆರಂಭಿಸುವ ಮಾತನಾಡಿದ್ದಾರೆ.


ಮಹಿಳೆಯರಿಗೂ ಐಪಿಎಲ್ ಆಯೋಜಿಸುವ ಯೋಜನೆ ನಮ್ಮ ಮುಂದಿದೆ. ಸದ್ಯದಲ್ಲೇ ಇದರ ಬಗ್ಗೆ ರೂಪುರೇಷೆ ಸಿದ್ಧಪಡಿಸಲಿದ್ದೇವೆ ಎಂದು ಗಂಗೂಲಿ ಹೇಳಿದ್ದಾರೆ.

ಗಂಗೂಲಿ ಈ ಹೇಳಿಕೆ ನೀಡುತ್ತಿದ್ದಂತೇ ಮಹಿಳಾ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್, ಪೂನಮ್ ಯಾದವ್ ಸೇರಿದಂತೆ ಅನೇಕರು ಟ್ವಿಟರ್ ಮೂಲಕ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ