ಆಂಟಿಗುವಾ: ಟಿ20 ವಿಶ್ವಕಪ್ ನಲ್ಲಿ ಅಗತ್ಯ ಸಂದರ್ಭದಲ್ಲೇ ಸಿಡಿದೆದ್ದ ಇಂಗ್ಲೆಂಡ್ ತಂಡ ನಮೀಬಿಯಾ ವಿರುದ್ಧ 48 ರನ್ ಗಳ ಗುರಿಯನ್ನು 19 ಬಾಲ್ ಗಳಲ್ಲಿ ಚೇಸ್ ಮಾಡಿ ದಾಖಲೆ ಮಾಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಒಮನ್ ಬ್ಯಾಟಿಂಗ್ ಸಂಪೂರ್ಣ ಪತರಗುಟ್ಟಿತು. ಕೇವಲ ಶೊಯೇಬ್ ಖಾನ್ 11 ಗಳಿಸಿದ್ದು ಬಿಟ್ಟರೆ ಉಳಿದೆಲ್ಲಾ ಆಟಗಾರರ ಸ್ಕೋರ್ 10 ರ ಗಡಿಯನ್ನೂ ದಾಟಲಿಲ್ಲ. ಇಂಗ್ಲೆಂಡ್ ಪರ ಮಾರಕ ದಾಳಿ ಸಂಘಟಿಸಿದ ಆದಿಲ್ ರಶೀದ್ 4 ವಿಕೆಟ್ ಕಬಳಿಸಿದರೆ ಜೋಫ್ರಾ ಆರ್ಚರ್, ಮಾರ್ಕ್ ವುಡ್ ತಲಾ 3 ವಿಕೆಟ್ ಕಬಳಿಸಿ ಮಿಂಚಿದರು. ಅಂತಿಮವಾಗಿ ಒಮನ್ ಕೇವಲ 13.2 ಓವರ್ ಗಳಲ್ಲಿ 47 ರನ್ ಗಳಿಗೆ ಆಲೌಟ್ ಆಯಿತು.
ಈ ಮೊತ್ತ ಬೆನ್ನತ್ತುವುದು ಇಂಗ್ಲೆಂಡ್ ಗೆ ನೀರು ಕುಡಿದಷ್ಟೇ ಸಲೀಸಾಯಿತು. ಕೇವಲ 3.1 ಓವರ್ ಗಳಲ್ಲೇ 2 ವಿಕೆಟ್ ಕಳೆದುಕೊಂಡು 50 ರನ್ ಗಳಿಸಿದ ಇಂಗ್ಲೆಂಡ್ ದಾಖಲೆಯ ಗೆಲುವು ಪಡೆಯಿತು. ಜೋಸ್ ಬಟ್ಲರ್ ಅಜೇಯ 24 ರನ್ ಗಳಿಸಿದರು. ಫಿಲಿಪ್ ಸಾಲ್ಟ್ 12, ವಿಲ್ ಜ್ಯಾಕ್ಸ್ 5 ರನ್ ಗಳಿಸಿ ಔಟಾದರು. ಜಾನಿ ಬೇರ್ ಸ್ಟೋ ಅಜೇಯ 8 ರನ್ ಗಳಿಸಿದರು.
ಈ ಗೆಲುವಿನೊಂದಿಗೆ ಇಂಗ್ಲೆಂಡ್ ಟಿ20 ವಿಶ್ವಕಪ್ ಕ್ರಿಕೆಟ್ ನಲ್ಲಿ ಅತ್ಯಂತ ಹೆಚ್ಚು ಬಾಲ್ ಬಾಕಿ ಇರುವಂತೆಯೇ ಗೆದ್ದ ದಾಖಲೆ ಮಾಡಿತು. ಟಿ20 ವಿಶ್ವಕಪ್ ಕ್ರಿಕೆಟ್ ನಲ್ಲಿ ಒಮನ್ ತಂಡ ನಾಲ್ಕನೇ ಕನಿಷ್ಠ ಮೊತ್ತಕ್ಕೆ ಆಲೌಟ್ ಆಯಿತು. ಇದರೊಂದಿಗೆ ಇಂಗ್ಲೆಂಡ್ 8 ರ ಘಟ್ಟಕ್ಕೆ ತಲುಪುವ ಹಾದಿ ಸುಗಮವಾಗಿದೆ.