ಸೈಂಟ್ ವಿನ್ಸೆಂಟ್: ಟಿ20 ವಿಶ್ವಕಪ್ ನಲ್ಲಿ ಬಾಂಗ್ಲಾದೇಶ ಐತಿಹಾಸಿಕ ಸಾಧನೆ ಮಾಡಿದೆ. ನೇಪಾಳ ವಿರುದ್ಧದ ಪಂದ್ಯದಲ್ಲಿ ಕನಿಷ್ಠ ಮೊತ್ತ ಡಿಫೆಂಡ್ ಮಾಡಿ ಗೆದ್ದ ದಾಖಲೆ ಮಾಡಿದೆ. ಈ ಪಂದ್ಯದಲ್ಲಿ ಬಾಂಗ್ಲಾ 21 ರನ್ ಗಳ ಗೆಲುವು ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 19.3 ಓವರ್ ಗಳಲ್ಲಿ 106 ರನ್ ಗಳಿಗೆ ಆಲೌಟ್ ಆಯಿತು. ಬಾಂಗ್ಲಾದೇಶ ಪರ ಶಕೀಬ್ ಅಲ್ ಹಸನ್ 17 ರನ್ ಗಳಿಸಿದ್ದೇ ಗರಿಷ್ಠ ಸಾಧನೆ. ನೇಪಾಳ ಪರ ಸೋಂಪಲ್ ಕಮಿ, ದೀಪೇಂದ್ರ ಸಿಂಗ್, ರೋಹಿತ್ ಪೌಡೆಲ್, ಲಮಿಷನೆ ತಲಾ 2 ವಿಕೆಟ್ ಕಬಳಿಸಿದರು.
ಈ ಮೊತ್ತ ಬೆನ್ನತ್ತಿದ ನೇಪಾಳ ತನ್ಝೋಮ್ ಹಸನ್ ಶಕೀಬ್ ಮತ್ತು ಮುಸ್ತಾಫಿರ್ ರೆಹಮಾನ್ ಬೌಲಿಂಗ್ ಗೆ ತತ್ತರಿಸಿ 19.2 ಓವರ್ ಗಳಲ್ಲಿ ಕೇವಲ 85 ರನ್ ಗಳಿಗೆ ಆಲೌಟ್ ಆಯಿತು. ನೇಪಾಳ ಪರ ಕುಶಾಲ್ ಮಲ್ಲ 27, ದೀಪೇಂದ್ರ ಸಿಂಗ್ 25 ರನ್ ಗಳಿಸಿ ಮಿಂಚಿದರು. ಆದರೆ ಟಾಪ್ ಆರ್ಡರ್ ಬ್ಯಾಟಿಗರು ನೇಪಾಳಗೆ ಕೈ ಕೊಟ್ಟರು.
ಇದರೊಂದಿಗೆ ಬಾಂಗ್ಲಾದೇಶ ಟಿ20 ವಿಶ್ವಕಪ್ ಇತಿಹಾಸದಲ್ಲಿ ಕ ನಿಷ್ಠ ಮೊತ್ತ ಡಿಫೆಂಡ್ ಮಾಡಿ ಗೆದ್ದ ದಾಖಲೆ ಮಾಡಿತು. ಅಲ್ಲದೆ ಈ ಗೆಲುವಿನೊಂದಿಗೆ ಬಾಂಗ್ಲಾದೇಶ ಸೂಪರ್ 8 ರಲ್ಲಿ ಸ್ಥಾನ ಖಚಿತಪಡಿಸಿತು.