ವಿಶ್ವಕಪ್ ಗೆ ಮೊದಲು ದ.ಆಫ್ರಿಕಾ, ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಟಿ20 ಸರಣಿ

ಶುಕ್ರವಾರ, 19 ಮಾರ್ಚ್ 2021 (09:30 IST)
ಮುಂಬೈ: ಅಕ್ಟೋಬರ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆ ಮೊದಲು ಟೀಂ ಇಂಡಿಯಾ ದ.ಆಫ್ರಿಕಾ ಮತ್ತು ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಆಡುವ ನಿರೀಕ್ಷೆಯಿದೆ.


ವಿಶ್ವಕಪ್ ಗೆ ಮೊದಲು ಟೀಂ ಇಂಡಿಯಾಕ್ಕೆ ಮತ್ತಷ್ಟು ಸಿದ್ಧತೆ ನಡೆಸಲು ಇವೆರಡೂ ತಂಡಗಳ ವಿರುದ್ಧ ಸರಣಿ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಇಂಗ್ಲೆಂಡ್ ವಿರುದ್ಧ ಪ್ರಸಕ್ತ ನಡೆಯುತ್ತಿರುವ ಸರಣಿಯಲ್ಲೂ ಟೀಂ ಇಂಡಿಯಾ ವಿಶ್ವಕಪ್ ದೃಷ್ಟಿಯಿಂದ ಹಲವು ಆಟಗಾರರಿಗೆ ಅವಕಾಶ ನೀಡುವ ಮೂಲಕ ಪ್ರಯೋಗ ನಡೆಸುತ್ತಿದೆ.

ಹೀಗಾಗಿ ಆಫ್ರಿಕಾ, ಕಿವೀಸ್ ತಂಡಗಳನ್ನು ಭಾರತಕ್ಕೆ ಆಹ್ವಾನಿಸಲಾಗುತ್ತಿದೆ. ಇದಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ. ಐಪಿಎಲ್ ಬಳಿಕ ಈ ಸರಣಿ ನಡೆಯುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ