ಗೌತಮ್ ಗಂಭೀರ್ ಟೀಂ ಇಂಡಿಯಾ ಕೋಚ್ ಆಗಿ ಘೋಷಣೆ ತಡವಾಗಿದ್ದಕ್ಕೆ ಇದೇ ಕಾರಣ

Krishnaveni K

ಬುಧವಾರ, 10 ಜುಲೈ 2024 (08:40 IST)
ಮುಂಬೈ: ರಾಹುಲ್ ದ್ರಾವಿಡ್ ರಿಂದ ತೆರವಾದ ಟೀಂ ಇಂಡಿಯಾ ಮುಂದಿನ ಕೋಚ್ ಹುದ್ದೆಗೆ ಗೌತಮ್ ಗಂಭೀರ್ ರನ್ನು ಆಯ್ಕೆ ಮಾಡಲಾಗಿದೆ. ಸ್ವತಃ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ವಿಚಾರವನ್ನು ಘೋಷಣೆ ಮಾಡಿದ್ದಾರೆ.

ಗೌತಮ್ ಗಂಭೀರ್ ಟೀಂ ಇಂಡಿಯಾ ಮುಂದಿನ ಕೋಚ್ ಎನ್ನುವುದು ಹೆಚ್ಚು ಕಡಿಮೆ ಫಿಕ್ಸ್ ಆಗಿತ್ತು. ಆದರೆ ಬಿಸಿಸಿಐ ಇನ್ನೂ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿರಲಿಲ್ಲ. ಗಂಭೀರ್ ಕೆಕೆಆರ್ ತಂಡಕ್ಕೆ ಗುಡ್ ಬೈ ಹೇಳಿ, ಈಡನ್ ಗಾರ್ಡನ್ ನಲ್ಲಿ ವಿದಾಯ ವಿಡಿಯೋವೊಂದರ ಚಿತ್ರೀಕರಣದಲ್ಲೂ ಭಾಗಿಯಾಗಿದ್ದರು. ಹೀಗಿದ್ದರೂ ಘೋಷಣೆ ಯಾಕಾಗಿಲ್ಲ ಎಂಬುದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು.

ಆದರೆ ಅವರನ್ನು ಕೋಚ್ ಹುದ್ದೆಗೆ ತಡವಾಗಿ ಘೋಷಣೆ ಮಾಡಲು ಕಾರಣವೂ ಇದೆ. ಗೌತಮ್ ಗಂಭೀರ್ ಜೊತೆಗೆ ಈಗಾಗಲೇ ಬಿಸಿಸಿಐ ಕೋಚ್ ಕಾರ್ಯತಂತ್ರದ ಬಗ್ಗೆ ಮಾತುಕತೆ ನಡೆಸಿದ್ದರು. ಆದರೆ ವೇತನ ವಿಚಾರ ಇನ್ನೂ ಫೈನಲ್ ಆಗಿರಲಿಲ್ಲ. ರಾಹುಲ್ ದ್ರಾವಿಡ್ 12 ಕೋಟಿ ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿದೆ. ಆದರೆ ಗಂಭೀರ್ ಅದಕ್ಕಿಂತಲೂ ಹೆಚ್ಚಿನ ಮೊತ್ತಕ್ಕೆ ಬೇಡಿಕೆಯಿಟ್ಟಿದ್ದರಂತೆ.

ಈ ವಿಚಾರವಾಗಿ ಈಗ ಬಿಸಿಸಿಐ ಜೊತೆ ಗಂಭೀರ್ ಮಾತುಕತೆ ನಡೆಯುತ್ತಿತ್ತು. ಸಂಭಾವನೆ, ಎಷ್ಟು ವರ್ಷದ ಒಪ್ಪಂದ ಇತ್ಯಾದಿ ವಿಚಾರಗಳು ಇನ್ನೂ ಫೈನಲ್ ಆಗಿರಲಿಲ್ಲ. ಇದೀಗ ಇದೆಲ್ಲವೂ ಅಂತಿಮವಾದ ಬಳಿಕ ಅಧಿಕೃತವಾಗಿ ಗಂಭೀರ್ ಭಾರತ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ