ಐಸಿಸಿ ದಶಕದ ಟೆಸ್ಟ್ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕ

ಭಾನುವಾರ, 27 ಡಿಸೆಂಬರ್ 2020 (16:42 IST)
ದುಬೈ: ಐಸಿಸಿ ದಶಕದ ಟೆಸ್ಟ್ ತಂಡಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಟಿ20 ಮತ್ತು ಟೆಸ್ಟ್ ತಂಡಕ್ಕೆ ಭಾರತೀಯರೇ ನಾಯಕರಾಗಿ ಆಯ್ಕೆಯಾಗಿದ್ದಾರೆ.


ದಶಕದ ಟಿ20 ತಂಡಕ್ಕೆ ಧೋನಿ ನಾಯಕರಾದರೆ ಕೊಹ್ಲಿ ಟೆಸ್ಟ್ ಮಾದರಿಗೆ ನಾಯಕರಾಗಿದ್ದಾರೆ. ಟೆಸ್ಟ್ ತಂಡದಲ್ಲಿ ಕೊಹ್ಲಿಯಲ್ಲದೆ, ಭಾರತೀಯರ ಪೈಕಿ ರವಿಚಂದ್ರನ್ ಅಶ್ವಿನ್ ಕೂಡಾ ಸ್ಥಾನ ಪಡೆದಿದ್ದಾರೆ. ಇವರಲ್ಲದೆ, ವಿಕೆಟ್ ಕೀಪರ್ ಆಗಿ ಶ್ರೀಲಂಕಾದ ಕುಮಾರ ಸಂಗಕ್ಕಾರ, ಅಲೆಸ್ಟರ್ ಕುಕ್, ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸ್, ಬೆನ್ ಸ್ಟೋಕ್ಸ್, ಸ್ಟೀವ್ ಸ್ಮಿತ್, ಡೇಲ್ ಸ್ಟೈನ್, ಸ್ಟುವರ್ಟ್ ಬ್ರಾಡ್, ಹಾಗೂ ಜೇಮ್ಸ್ ಆಂಡರ್ಸನ್ ಆಯ್ಕೆಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ