ಎನ್ ಸಿಸಿ ನವೀಕರಣ ಸಮಿತಿಯಲ್ಲಿ ಧೋನಿ, ಆನಂದ್ ಮಹೀಂದ್ರಾ

ಗುರುವಾರ, 16 ಸೆಪ್ಟಂಬರ್ 2021 (17:12 IST)
ನವದೆಹಲಿ: ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್ ಸಿಸಿ) ಯ ನವೀಕರಣಗೊಳಿಸಲು ರಕ್ಷಣಾ ಇಲಾಖೆ ರಚಿಸಿರುವ ಸ್ಥಾಯಿ ಸಮಿತಿಯಲ್ಲಿ ಕ್ರಿಕೆಟಿಗ ಧೋನಿ, ಉದ್ಯಮಿ ಆನಂದ್ ಮಹೀಂದ್ರಾ ಸದಸ್ಯರಾಗಿ ಸ್ಥಾನ ಪಡೆದಿದ್ದಾರೆ.


ಧೋನಿ ಸೇನೆಯ ಗೌರವಾನ್ವಿತ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಹೊಂದಿದ್ದಾರೆ. ಈಗಾಗಲೇ ಭಾರತೀಯ ಸೇನೆಯೊಂದಿಗೆ 15 ದಿನಗಳ ಕಾಲ ಕರ್ತವ್ಯ ಕೂಡಾ ನಿರ್ವಹಿಸಿದ್ದರು. ಇನ್ನು, ಆನಂದ್ ಮಹೀಂದ್ರಾ ರಕ್ಷಣಾ ಇಲಾಖೆಗೆ ಬೇಕಾಗುವ ವಸ್ತುಗಳ ನಿರ್ಮಾಣಕ್ಕೆ ಪ್ರಮುಖ ಕೊಡುಗೆ ನೀಡುತ್ತಿದ್ದಾರೆ.

ಈಗಿನ ಕಾಲಕ್ಕೆ ಹೆಚ್ಚು ಪ್ರಸ್ತುತವಾಗುವಂತೆ ಎನ್ ಸಿಸಿಯಲ್ಲಿ ಬದಲಾವಣೆ ತರಲು ಈ ಸಮಿತಿ ಯೋಜನೆ ರೂಪಿಸಲಿದೆ. ಇದಕ್ಕೆ ಮಾಜಿ ಸಂಸದ ಬೈಜಯಂತ್ ಪಾಂಡಾ ಮುಖ್ಯಸ್ಥರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ