ಟೀಂ ಇಂಡಿಯಾ ಗೆಲುವಿನ ಸಂಭ್ರಮದಲ್ಲಿದ್ದಾಗ ನಾಯಕ ರೋಹಿತ್ ಶರ್ಮಾ ಮಾಡಿದ್ದೇನು ಗೊತ್ತಾ

Sampriya

ಭಾನುವಾರ, 30 ಜೂನ್ 2024 (13:29 IST)
Photo Courtesy X
ಮುಂಬೈ: 17 ವರ್ಷಗಳ ನಂತರ ಭಾರತಕ್ಕೆ ಟ್ವೆಂಟಿ 20 ವಿಶ್ವಕಪ್ ತಂದುಕೊಟ್ಟ ನೆನಪಿನ ಖುಷಿಯಲ್ಲಿ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ಬಾರ್ಬಡೋಸ್ ಪಿಚ್‌ನಿಂದ ಮಣ್ಣನ್ನು ಸೇವಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರೋಹಿತ್ ಶರ್ಮಾ ಅವರ ನಾಯಕತ್ವ ಮುಂದಾಳತ್ವದ ಟೀಂ ಇಂಡಿಯಾ ಟ್ವೆಂಟಿ 20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಐತಿಹಾಸಿಕ ಗೆಲುವನ್ನು ತನ್ನದಾಗಿಸಿಕೊಂಡಿತು. ಕೊನೆಗೂ ಐಸಿಸಿ ಪ್ರಶಸ್ತಿಗಾಗಿ ಭಾರತದ 11 ವರ್ಷಗಳ ಕಾಯುವಿಕೆಯನ್ನು ಈ ಗೆಲುವು ಕೊನೆಗೊಳಿಸಿತು.

ಎಂಎಸ್ ಧೋನಿ ನಂತರ ಟಿ20 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದ ಎರಡನೇ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಅವರು ಪಾತ್ರರಾದರು. ಐತಿಹಾಸಿಕ ಗೆಲುವನ್ನು ಸಂಭ್ರಮಿಸುತ್ತಾ ಆಟಗಾರರು ಭಾವುಕರಾದರು. ಈ ಅಮೋಘ ಗೆಲುವನ್ನು ತಂದುಕೊಡುವಲ್ಲಿ ಪ್ರಮುಖರಾದವರಲ್ಲಿ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ಪ್ರಮುಖರು. ಗೆಲುವಿನ ಸವಿ ನೆನಪಿಗಾಗಿ ರೋಹಿತ್ ಶರ್ಮಾ ಬಾರ್ಬಡೋಸ್ ಪಿಚ್‌ನ ಮಣ್ಣು ತಿಂದು, ಧನ್ಯತೆಯನ್ನು ತಿಳಿಸಿದರು. ಸದ್ಯ ಟೀಂ ಇಂಡಿಯಾದ ನಾಯಕನ ಈ ನಡೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಐಸಿಸಿ ಶೇರ್ ಮಾಡಿರುವ ವಿಡಿಯೋದಲ್ಲಿ ರೋಹಿತ್ ಬಾಯಿಗೆ ಮಣ್ಣನ್ನು ಹಾಕಿಕೊಂಡಿರುವುದನ್ನು ನಾವು ನೋಡಬಹುದು. ಬಾರ್ಬಡೋಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಗೆಲುವು ಸಾಧಿಸಿದ್ದು ಐತಿಹಾಸಿಕ ಸಾಧನೆ ಮಾಡಿದೆ. ಒಂದೇ ಒಂದು ಪಂದ್ಯವನ್ನು ಸೋಲದೆ ಐಸಿಸಿ ಟ್ವೆಂಟಿ 20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ಮೊದಲ ತಂಡವಾಯಿತು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ