ಒಳಗೆ ಹಾಕಿಸ್ಬೇಕಾ? ವಿರಾಟ್ ಕೊಹ್ಲಿಯ ಡೈನಾಸರ್ ವಿಡಿಯೋಗೆ ಅರಣ್ಯ ಇಲಾಖೆ ಪ್ರತಿಕ್ರಿಯೆ!

ಶುಕ್ರವಾರ, 22 ಮೇ 2020 (10:09 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಡೈನಾಸರ್ ಅವತಾರದ ಫನ್ನಿ ವಿಡಿಯೋವೊಂದನ್ನು ಅನುಷ್ಕಾ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು ವೈರಲ್ ಆಗಿತ್ತು. ಇದೀಗ ಆ ವಿಡಿಯೋಗೆ ನಾಗ್ಪುರ ಅರಣ್ಯ ಇಲಾಖೆ ಅತ್ಯುತ್ತಮ ಪ್ರತಿಕ್ರಿಯೆ ನೀಡಿದೆ.


ಡೈನಾಸರ್ ಒಂದು ಹೊರಗೆ ತಿರುಗಾಡುವುದನ್ನು ಕಂಡೆ ಎಂದು ಅನುಷ್ಕಾ ವಿರಾಟ್ ಫನ್ನಿ ವಿಡಿಯೋ ಜತೆಗೆ ಬರೆದುಕೊಂಡಿದ್ದಾರೆ. ಇದಕ್ಕೆ ಹಲವು ಸೆಲೆಬ್ರಿಟಿಗಳೂ ಕಾಮೆಂಟ್ ಮಾಡಿದ್ದರು.

ಅವರ ಜತೆ ನಾಗ್ಪುರ ಅರಣ್ಯ ವಲಯಾಧಿಕಾರಿಗಳ ಸೋಷಿಯಲ್ ಮೀಡಿಯಾ ಖಾತೆಯಿಂದ ಕಾಮೆಂಟ್ ಮಾಡಲಾಗಿದ್ದು, ‘ಮಹಾರಾಷ್ಟ್ರ ಅರಣ್ಯ ಇಲಾಖೆಗೆ ರಕ್ಷಣಾ ತಂಡವನ್ನು ಕಳುಹಿಸಲು ಹೇಳಬೇಕಾ?’ ಎಂದು ಪ್ರಶ್ನಿಸಿದ್ದಾರೆ. ಈ ಕಾಮೆಂಟ್ ಈಗ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ