ಬೆಂಗಳೂರು: ಇಲ್ಲಿ ನಡೆದ ಆರ್‌ಸಿಬಿ ಅನ್ ಬಾಕ್ಸ್ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿಯನ್ನು ಕನ್ನಡತಿ ಶ್ರೇಯಾಂಕ ಭೇಟಿ, ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಆರ್‌ಸಿಬಿ ಕ್ರಿಕೆಟ್ ಟ್ರೋಪಿ ಮುಡಿಗೇರಿಸಿಕೊಳ್ಳುವಲ್ಲಿ ಶ್ರೇಯಾಂಕ ಪಾಟೀಲ ಅವರ ಪಾತ್ರ ಪ್ರಮುಖವಾಗಿದೆ.
ಶ್ರೇಯಾಂಕ ಅವರು ಟೂರ್ನಿಯ 'ಪರ್ಪಲ್ ಕ್ಯಾಪ್' ಜೊತೆಗೆ, 'ಎಮರ್ಜಿಂಗ್ ಪ್ಲೆಯರ್' ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು.
ನಿನ್ನೆ ನಡೆದ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಜತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿರುವ ಕನ್ನಡತಿ, 'ಅವರ (ಕೊಹ್ಲಿ) ಕಾರಣದಿಂದಲೇ ಕ್ರಿಕೆಟ್ ನೋಡಲು ಶುರು ಮಾಡಿದೆ. ಅವರಂತಾಬೇಕು ಎಂಬ ಕನಸಿನೊಂದಿಗೆ ಬೆಳೆದೆ. ಕಳೆದ ರಾತ್ರಿ ನನ್ನ ಜೀವನದ ಅತ್ಯಮೂಲ್ಯ ಘಟನೆ ನಡೆಯಿತು' ಎಂದು ಹೇಳಿಕೊಂಡಿದ್ದಾರೆ.
ಈಗಲೂ ನಾನು ಕೊಹ್ಲಿ ಅಭಿಮಾನಿ ಎನ್ನುತ್ತಾ #StillAFanGirl ಟ್ಯಾಗ್ ಬಳಸಿರುವ ಅವರು, 'ಹಾಯ್ ಶ್ರೇಯಾಂಕ, ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದೆ ಎಂದು ಕೊಹ್ಲಿ ಹೇಳಿದರು. ಅವರಿಗೆ ನನ್ನ ಹೆಸರು ಗೊತ್ತು' ಎಂದು ಬರೆದು ಸಂಭ್ರಮಿಸಿದ್ದಾರೆ.