ಯುವ ರಿಷಬ್ ಪಂತ್ ಬಗ್ಗೆ ರಾಹುಲ್ ದ್ರಾವಿಡ್ ಗೆ ಅದೆಂಥಾ ನಂಬಿಕೆ?
ರಿಷಬ್ ಟೆಸ್ಟ್ ಕ್ರಿಕೆಟ್ ನಲ್ಲಿ ಏನು ಮಾಡಲು ಸಾಧ್ಯ ಎಂದು ಅನುಮಾನ ಪಡುತ್ತಿರುವವರಿಗೆ ದ್ರಾವಿಡ್ ಸರಿಯಾಗಿಯೇ ಉತ್ತರ ಕೊಟ್ಟಿದ್ದಾರೆ. ಆತನಲ್ಲಿ ಟೆಸ್ಟ್ ಕ್ರಿಕೆಟ್ ಆಡುವ ಸಾಮರ್ಥ್ಯ, ತಾಳ್ಮೆ ಎರಡೂ ಇದೆ ಎಂದು ದ್ರಾವಿಡ್ ಹೇಳಿದ್ದಾರೆ.
ಭಾರತ ಎ ತಂಡ ಇಂಗ್ಲೆಂಡ್ ಪ್ರವಾಸ ಮಾಡಿದ್ದಾಗ ರಿಷಬ್ ಚೆನ್ನಾಗಿಯೇ ಆಡಿದ್ದರು. ದೇಶೀಯ ಕ್ರಿಕೆಟ್, ಐಪಿಎಲ್ ನಲ್ಲೂ ಅವರ ಪ್ರದರ್ಶನ ಆಶಾದಾಯಕವಾಗಿದೆ. ಹಾಗಾಗಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಅವಕಾಶ ಸಿಕ್ಕರೆ ಆತ ಚೆನ್ನಾಗಿ ಆಡಬಹುದು ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.