ತುಂಬಾ ರೋಮ್ಯಾನ್ಸ್ ಮಾಡ್ತೇವೆ ಆದ್ರೂ ಮಕ್ಕಳಾಗಿಲ್ಲ ಯಾಕೆ?
ಬುಧವಾರ, 20 ಮಾರ್ಚ್ 2019 (21:00 IST)
ಸಮಸ್ಯೆ : ಸರ್ ನನಗೀಗ 30 ವರ್ಷ . ನನ್ನ ಯಜಮಾನರಿಗೆ 35 ವರ್ಷವಾಗಿದೆ . ಮದುವೆಯಾಗಿ ಎರಡು ವರ್ಷ ಕಳೆದರೂ ಇನ್ನೂ ಮಕ್ಕಳಾಗಿಲ್ಲ . ವೈದ್ಯರಲ್ಲಿಗೆ ತೋರಿಸಿದಾಗ ನನಗೆ ಹಾಗೂ ಪತಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ತಿಳಿಸಿದ್ದಾರೆ . ನಾವಿಬ್ರೂ ತುಂಬಾ ಚೆನ್ನಾಗಿ ಸೆಕ್ಸ್ ಮಾಡ್ತೇವೆ. ಹಗಲು ರಾತ್ರಿ ಎನ್ನದೇ ಸುಖ ಅನುಭಿವಿಸುತ್ತೇವೆ. ಆದರೂ ಯಾಕೆ ಮಕ್ಕಳಾಗಿಲ್ಲ ಎಂದೇ ಚಿಂತೆಯಾಗಿದೆ . ಆದರೆ ಸಂಭೋಗ ನಡೆಸಿದ ಬಳಿಕ ಯೋನಿಯಿಂದ ವೀರ್ಯ ಹೊರ ಬರುತ್ತದೆ . ಇದರಿಂದ ಮಕ್ಕಳಾಗದಿರಬಹುದೇ ? ಪರಿಹಾರ ತಿಳಿಸಿ .
ಸಲಹೆ : ನಿಮಗಿನ್ನೂ ಮದುವೆಯಾಗಿ ಎರಡು ವರ್ಷವಷ್ಟೇ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಮಕ್ಕಳಾಗುವ ಸಾಧ್ಯತೆ ಇದೆ . ಅಲ್ಲದೆ ವೈದ್ಯರು ನಿಮಗಿಬ್ಬರಿಗೂ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿರುವಾಗ ಯಾವುದಕ್ಕೂ ಚಿಂತೆ ಪಡುವ ಅಗತ್ಯವಿಲ್ಲ . ಸಂಭೋಗ ನಡೆಸುವ ಭಂಗಿಗೂ ಮಕ್ಕಳಾಗದಿರುವುದಕ್ಕೂ ಯಾವುದೇ ಸಂಬಂಧವಿಲ್ಲ . ಯಾಕೆಂದರೆ ಸಂಪರ್ಕ ನಡೆಸುವಾಗ ಪುರುಷನ ವೀರ್ಯವು ಸ್ತೀ ಜನನಾಂಗದೊಳಗಡೆ ಚಿಮ್ಮುವುದರಿಂದ ಸಹಜವಾಗಿಯೇ ಗರ್ಭಾಶಯ ತಲುಪುತ್ತದೆ . ಸಂಬೋಗದ ನಂತರ ಯೋನಿಯಿಂದ ವೀರ್ಯ ಹೊರಬರುವುದು ಕೂಡಾ ತೀರಾ ಸಹಜ .
ಸಾಮಾನ್ಯವಾಗಿ ಲೈಂಗಿಕ ಕ್ರಿಯೆಯ ಅಂತ್ಯದಲ್ಲಿ ವೀರ್ಯಾಣು ಅಂಡಾಣುವಿನೊಂದಿಗೆ ಸಂಯೋಗ ಹೊಂದದೇ ಇರುವುದೂ ಗರ್ಭಧಾರಣೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ . ಇಂಥ ಸಂದರ್ಭಗಳಿಂದ ಅಂಡಾಣು ಫಲಿತವಾಗುವುದು ಕಷ್ಟವಾಗುತ್ತದೆ . ಒಂದು ಋತುಚಕ್ರದ ನಿಗದಿತ ದಿನಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗದಿದ್ದಲ್ಲಿ ಅಂಡಾಣು ಭ್ರೂಣ ಕಟ್ಟುವಲ್ಲಿ ವಿಫಲವಾಗುತ್ತದೆ . ವಿವಾಹಿತರ ನಡುವೆ ಈ ದಿನಗಳಲ್ಲಿ ಮಿಲನವಾಗದೇ ಇರುವಂಥ ಪರಿಸ್ಥಿತಿಗಳಲ್ಲಿ ಗರ್ಭಧಾರಣೆ ಕಷ್ಟವಾಗುತ್ತದೆ . ಇದಲ್ಲದೆ ಡಿಂಭನಾಳದಲ್ಲಿನ ಅಡೆತಡೆಗಳಿಂದಾಗಿ ವೀರ್ಯಾಣುವು ಅಂಡಾಣುವಿನೊಂದಿಗೆ ಸಂಯೋಗವಾಗುವುದು ತಡೆದಂತಾಗುತ್ತದೆ . ಒಂದು ವೇಳೆ ಸಂಯೋಗವಾದರೂ ಸಕಾಲದಲ್ಲಿ ಆಗದೇ ಗರ್ಭಾಶಯದ ಗೋಡೆಗೆ ಭ್ರೂಣ ಕಟ್ಟದಂತೆ ಆಗುತ್ತದೆ .
ಮಹಿಳೆಯರಲ್ಲಿ ಗರ್ಭಾಶಯದಲ್ಲಿ ಅಂಡಾಣು ಉತ್ಪತ್ತಿಯಾಗುತ್ತದೆ . ಆದರೆ ಉತ್ಪತ್ತಿಯಾದ ಅಂಡಾಣುವು ಗರ್ಭಕಟ್ಟುವಂತೆ ಬೇಕಾಗುವ ಗ್ರಂಥಿಯ ಸ್ರವಿಸುವಿಕೆ ಸಾಕಷ್ಟು ಪ್ರಮಾಣದಲ್ಲಿ ಆಗದೇ ಇರುವ ಹಂತ . ಪ್ರೊಜೆಸ್ಟರಾನ್ ಹಾರ್ಮೋನು ಗರ್ಭಕೋಶವನ್ನು ಕಾಪಾಡುವ ಹಾರ್ಮೋನು ಆಗಿದೆ . ಈ ಸನ್ನಿವೇಶದಲ್ಲಿ ಪ್ರೊಜೆಸ್ಟರಾನ್ ಹಾರ್ಮೋನ್ ಉತ್ಪತ್ತಿ ಕಡಿಮೆ ಪ್ರಮಾಣದಲ್ಲಿ ಆಗುತ್ತದೆ . ಆಗ ಫಲಿತ ಅಂಡಾಣುವು ಗರ್ಭಕೋಶದ ಗೋಡೆಗೆ ಅಂಟಿಕೊಳ್ಳುವಲ್ಲಿ ವಿಫಲವಾಗುತ್ತದೆ . ಅನಿಯಮಿತ ಋತುಚಕ್ರದಿಂದಲೂ ಗರ್ಭಧಾರಣೆಗೆ ತಡೆಯುಂಟಾಗಬಹುದು .
ಬಹುತೇಕ ಮಹಿಳೆಯರು ತಮ್ಮ ಕುಟುಂಬವನ್ನು ಆರಂಭಿಸಲು ಯೋಚಿಸುವುದೇ 30 ರ ನಂತರ . ಕೆಲವು ಈ ಅವಧಿಯಲ್ಲಿ ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ . 30 ರ ನಂತರ ಸಂತಾನೋತ್ಪತ್ತಿಯ ಸಾಮಥ್ರ್ಯ ಕಡಿಮೆಯಾಗುತ್ತ ಹೋಗುತ್ತದೆ . ಗರ್ಭಧಾರಣೆಯ ಸಾಧ್ಯತೆಯೂ ಇಳಿಕೆಯಾಗುತ್ತ ಹೋಗುತ್ತದೆ . 35 ವರ್ಷಗಳನ್ನು ದಾಟಿರುವ ಮಹಿಳೆಯರು 6 ತಿಂಗಳ ಸತತ ಯತ್ನದ ನಂತರವೂ ಗರ್ಭ ಧರಿಸದೇ ಇದ್ದಲ್ಲಿ ತಮ್ಮ ವೈದ್ಯರೊಂದಿಗೆ ಮತ್ತೊಮ್ಮೆ ಸಮಾಲೋಚಿಸುವುದು ಒಳಿತು .
ಆ್ಯಪ್ನಲ್ಲಿ ವೀಕ್ಷಿಸಿ x