ಪ್ರೂಟ್ ಸಲಾಡ್ ಮಾಡುವಾಗ ಇದರ ಕುರಿತು ಎಚ್ಚರ ವಹಿಸಿ!

ಶುಕ್ರವಾರ, 15 ಜೂನ್ 2018 (09:12 IST)
ಬೆಂಗಳೂರು : ಪ್ರೂಟ್ ಸಲಾಡ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಪ್ರೂಟ್ ಸಲಾಡ್ ಮಾಡುವಾಗ ಎಲ್ಲರೂ ಒಂದು ವಿಷಯವನ್ನು ತಿಳಿದಿರಲೇಬೇಕು. ಅದೇನೆಂದರೆ  ಪ್ರೂಟ್ ಸಲಾಡ್ ಗೆ ಎಲ್ಲಾ ಬಗೆಯ ಹಣ್ಣುಗಳನ್ನು ಮಿಕ್ಸ್ ಮಾಡುವಂತಿಲ್ಲ. ಯಾಕೆಂದರೆ ಕೆಲವೊಂದು ಹಣ್ಣುಗಳನ್ನು ಮಿಕ್ಸ್ ಮಾಡಿದರೆ ನಮ್ಮ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ಆ ಹಣ್ಣುಗಳು ಯಾವುದೆಂಬುದನ್ನು ಮೊದಲು ತಿಳಿದುಕೊಳ್ಳಿ.


*ಕಲ್ಲಂಗಡಿ, ಕರ್ಬೂಜ ಈ ರೀತಿಯಾದ ಹಣ್ಣುಗಳನ್ನು ಬೇರೆ ಹಣ್ಣುಗಳ ಜೊತೆ ಮಿಕ್ಸ್ ಮಾಡಬೇಡಿ. ಯಾಕೆಂದರೆ ಈ ಹಣ್ಣುಗಳಲ್ಲಿ ನೀರಿನಂಶ ಅಧಿಕವಿರುವುದರಿಂದ ಬೇಗ ಜೀರ್ಣವಾಗುವುದು, ಉಳಿದ ಹಣ್ಣುಗಳು ಸ್ವಲ್ಪ ಅಧಿಕ ಸಮಯ ತೆಗೆದುಕೊಳ್ಳುವುದು. ಆದ್ದರಿಂದ ಈ ಹಣ್ಣುಗಳನ್ನು ಬೇರೆ ಹಣ್ಣುಗಳ ಜತೆ ಮಿಕ್ಸ್ ಮಾಡಿ ತಿಂದರೆ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ.


*ಸಿಹಿ ಹಣ್ಣುಗಳ ಜೊತೆ ಅಸಿಡಿಕ್ ಇರುವ ಹಣ್ಣುಗಳನ್ನು ಮಿಕ್ಸ್ ಮಾಡಬೇಡಿ. ಉದಾಹರಣೆಗೆ ದ್ರಾಕ್ಷಿ,ಸ್ಟ್ರಾಬೆರಿಯನ್ನು, ದಾಳಿಂಬೆ, ಪೀಚ್‌ ಈ ರೀತಿಯ ಹಣ್ಣುಗಳನ್ನು ಬಾಳೆಹಣ್ಣಿನ ಜತೆ ಮಿಕ್ಸ್ ಮಾಡಿ ತಿನ್ನಬೇಡಿ. ಅದೇ ದ್ರಾಕ್ಷಿ, ಸ್ಟ್ರಾಬೆರಿ ಈ ರೀತಿಯ ಅಸಿಡಿಕ್‌ ಹಣ್ಣುಗಳನ್ನು ಮಿಕ್ಸ್‌ ಮಾಡಿ ತಿನ್ನಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ