ಬೆಂಗಳೂರು : ಮುಖ ಮಾತ್ರ ನಮ್ಮ ಸೌಂದರ್ಯವನ್ನು ಹೆಚ್ಚಿಸುವುದಿಲ್ಲ. ಅದರ ಜೊತೆಗೆ ನಮ್ಮ ಕಾಲುಗಳ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು. ಕಾಲುಗಳ ಸೌಂದರ್ಯ ಕಾಪಾಡಿಕೊಳ್ಳಲು ಈ ಸಲಹೆಗಳನ್ನು ಪಾಲಿಸಿ.
*ಕಾಲುಗಳನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆದು ಬ್ರೆಶ್ ನಿಂದ ಉಜ್ಜಿ ತೊಳೆದು ಉಗುರುಗಳಿಗೆ ಶೇಪ್ ಕೊಡಿ.
*ಪ್ಯುಮಿಕ್ ಸ್ಟೋನ್ ಬಳಸಿ ಮಸಾಜ್ ಮಾಡಿ. ಬಿಸಿ ನೀರಿಗೆ ಕಲ್ಲುಪ್ಪು ಹಾಕಿ ಅದರಲ್ಲಿ ನಿಮ್ಮ ಪಾದಗಳನ್ನು ಹಾಕಿ ಅದರಲ್ಲಿ ಪಾದಗಳನ್ನು ಸ್ವಲ್ಪ ಹೊತ್ತು ಇಟ್ಟು ತೊಳೆದರೆ ಕಾಲುಗಳು ಮೃದುವಾಗುತ್ತವೆ.
*ಕಾಲಿಗೆ ಪ್ರತಿದಿನ ರಾತ್ರಿ ಎಣ್ಣೆಯಿಂದ ಮಸಾಜ್ ಮಾಡಿ ಪ್ಲಾಸ್ಟಿಕ್ ನಿಂದ ಸುತ್ತಿದರೆ ಕಾಲುಗಳು ಹೊಳೆಯುತ್ತಿರುತ್ತವೆ.