ಈ ಹೂವುಗಳಿಂದ ಏನೆಲ್ಲ ಆಹಾರ ಪದಾರ್ಥಗಳನ್ನು ತಯಾರಿಸಬಹುದು ಗೊತ್ತಾ?
ಬುಧವಾರ, 18 ಆಗಸ್ಟ್ 2021 (07:15 IST)
Flowers: ಹೂವುಗಳಲ್ಲಿರುವ ಪೋಷಕಾಂಶಗಳು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತವೆ. ಹೂವುಗಳು ಕೇವಲ ಅಲಂಕಾರಕ್ಕೆ ಮಾತ್ರ ಸೀಮಿತವಲ್ಲ. ಇದರಲ್ಲಿ ಆಹಾರ ಪದಾರ್ಥಗಳನ್ನು ಸಹ ತಯಾರಿಸಬಹುದು.
ಮೊದಲಿನಂದಲೂ ಹೂವುಗಳು ತಮ್ಮ ಅಪ್ರತಿಮ ಸೌಂದರ್ಯ, ಆಕರ್ಷಕ ಸುವಾಸನೆ, ಕೆಲ ರೋಗಗಳನ್ನು ಗುಣಪಡಿಸುವ ಶಕ್ತಿ ಮತ್ತು ಅಲಂಕಾರಕ್ಕೆ ಪ್ರಸಿದ್ಧವಾಗಿದೆ. ಆದರೆ ಹಣ್ಣುಗಳು, ಗಿಡಮೂಲಿಕೆಗಳು ಮತ್ತು ತರಕಾರಿಗಳಂತೆ ಹೂವುಗಳು ಸಹ ತಿನ್ನು ವಸ್ತು ಎಂದರೆ ಆಶ್ಚರ್ಯವಾಗಬಹುದು. ಹೌದು, ಹುವುಗಳಲ್ಲಿ ಹಲವಾರು ಆಹಾರ ಪದಾರ್ಥಗಳಲ್ಲಿ ಬಳಸಬಹುದು. ಆ ಹೂವುಗಳು ಯಾವುವು ಮತ್ತು ಅದರ ಪ್ರಯೋಜನಗಳು ಸೇರಿದಂತೆ ಅದನ್ನು ಸಂಗ್ರಹಿಸುವ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ. ಗುಲಾಬಿ
ಗುಲಾಬಿ ಹೂವು ಹೆಚ್ಚಿನ ಜನರ ಇಷ್ಟದ ಹೂವುಗಳಲ್ಲಿ ಒಂದು. ಇದನ್ನು ಹೆಚ್ಚು ಬಳಕೆ ಸಹ ಮಾಡಲಾಗುತ್ತದೆ. ಈ ಹೂವು ಸಿಹಿ ಹಣ್ಣಿನ ಸುವಾಸನೆಯನ್ನು ಹೊಂದಿರುತ್ತದೆ. ಇದರಿಂದ ತಯಾರಿಸುವ ಗುಲಾಬ್ ಜಲ್ ಮತ್ತು ಗುಲ್ಕಂದ್ ನಮಗೆ ಸಾಮಾನ್ಯವಾಗಿ ತಿಳಿಸಿರುವ ಆಹಾರ ಪದಾರ್ಥ. ಆದರೆ ಗುಲಾಬಿ ಚಹಾವು ನಿಮ್ಮ ದೇಹದ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ ಎಂಬ ವಿಚಾರ ತಿಳಿದಿದೆಯಾ? ಹೌದು, ದಾಲ್ಚಿನ್ನಿ ಮತ್ತು ಜೇನುತುಪ್ಪದೊಂದಿಗೆ ರೋಸ್ ವಾಟರ್ ಅನ್ನು ಚಹಾದಂತೆ ಮಾಡಿಕೊಂಡು ಸೇವಿಸಿ ತೂಕವನ್ನು ಕಡಿಮೆ ಮಾಡಬಹುದು. ಅಲ್ಲದೇ ನೀವು ಸೇವಿಸುವ ಸಲಾಡ್ನಲ್ಲಿ ನಟ್ಸ್ಗಳ ಜೊತೆ ಜೇನುತುಪ್ಪ ಸವರಿದ ಅಥವಾ ಒಣಗಿದ ಗುಲಾಬಿ ದಳಗಳನ್ನು ಸೇರಿಸುವುದರಿಂದ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೆ. ಗುಲಾಬಿ ದಳಗಳನ್ನು ಹಾಕುವುದರಿಂದ ಕೇವಲ ಸಲಾಡ್ ನೋಡಲು ಸುಂದರವಾಗಿ ಮಾತ್ರ ಕಾಣುವುದಲ್ಲದೇ, ನಿಮಗೆ ಹಿತವಾದ ಮತ್ತು ಆರೋಗ್ಯಕರ ಆಹಾರದ ಅನುಭವ ನೀಡುತ್ತದೆ. ಮಲ್ಲಿಗೆ
ಮಲ್ಲಿಗೆ ಚಹಾ, ಮಲ್ಲಿಗೆ ಸುಗಂಧ ದ್ರವ್ಯ ಈ ಮಲ್ಲಿಗೆ ಹೂವಿನಿಂದ ಬಹಳಷ್ಟು ಆಹಾರ ಪದಾರ್ಥಗಳನ್ನು ಸಹ ತಯಾರಿಸಬಹುದು.ಇದನ್ನು ಹಿಂದಿಯಲ್ಲಿ ಮೊಗ್ರ ಎಂದು ಕರೆಯಲಾಗುತ್ತದೆ. ಈ ಮಲ್ಲಿಗೆಯನ್ನು ಸಿಹಿತಿಂಡಿಗಳು ಮತ್ತು ಹೆಚ್ಚು ಪರಿಮಳಯುಕ್ತ ಸುವಾಸನೆಗಾಗಿ ಅಡುಗೆ ಮಾಡುವವರು ಹೆಚ್ಚಾಗಿ ಬಳಕೆ ಮಾಡುತ್ತಾರೆ. ನಿಮ್ಮ ಕುಕೀಸ್, ಕೇಕ್, ಸಲಾಡ್ ಮತ್ತು ಚಹಾಕ್ಕೆ ಮಲ್ಲಿಗೆಯನ್ನು ಸೇರಿಸಬಹುದು. ಮಲ್ಲಿಗೆ ಅಕ್ಕಿಯು ವಿಶ್ವದಾದ್ಯಂತ ಜನಪ್ರಿಯವಾಗಿರುವ ವಸ್ತು. ಇದು ವೈಜ್ಞಾನಿಕವಾಗಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ, ನರಗಳನ್ನು ಸಡಿಲಗೊಳಿಸುತ್ತದೆ, ಜೊತೆಗೆ ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ದಾಸವಾಳ
ದಾಸವಾಳ ಚಳಿಗಾಲಕ್ಕೆ ಹೇಳಿ ಮಾಡಿಸಿದ ಸೂಪರ್ ಫುಡ್. ದಾಸವಾಳವು ವಿಶಿಷ್ಟವಾದ ಸಿಟ್ರಸ್ ಮತ್ತು ಕಹಿ ರುಚಿಯನ್ನು ಹೊಂದಿರುತ್ತದೆ. ಆಂಧ್ರಪ್ರದೇಶದಲ್ಲಿ, ಗೊಂಗುರ ಪಚಡಿ ಎಂಬ ಅದ್ಭುತವಾದ ಆಹಾರ ಪದಾರ್ಥವನ್ನು ತಯಾರಿಸಲು ಸ್ಥಳೀಯರು ದಾಸವಾಳವನ್ನು ಮಸೂರ ಕರಿಯೊಂದಿಗೆ ಸೇರಿಸುತ್ತಾರೆ. ಒಣಗಿದ ದಾಸವಾಳವನ್ನು ನಿಮ್ಮ ಕೇಕ್, ಚಹಾ, ಚಟ್ನಿ ಸೇರಿದಂತೆ ಹಲವು ಆಹಾರ ಪದಾರ್ಥಗಳಲ್ಲಿ ಸೇರಿಸಬಹುದು. ಇದರಲ್ಲಿ ಅಧಿಕ ವಿಟಮಿನ್ ಸಿ, ಫೈಬರ್ ಮತ್ತು ಖನಿಜಗಳಿರುತ್ತದೆ. ಈ ದಾಸವಾಳ ಹೂವುಗಳು ತೂಕ ನಷ್ಟ ಮಾಡಲು, ಉತ್ತಮ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ದಾಸವಾಳ ಮತ್ತು ತೆಂಗಿನ ಎಣ್ಣೆ ಅಥವಾ ದಾಸವಾಳದ ನೀರು ಹಾಗೂ ಶಾಂಪೂ ಜೊತೆಗೆ ನಿಮ್ಮ ಕೂದಲನ್ನು ಮೃದುಗೊಳಿಸಲು ಸಹಕಾರಿ. ನಸ್ಟರ್ಷಿಯಮ್
ನಸ್ಟರ್ಷಿಯಮ್ ಹೂವುಗಳು ಮತ್ತು ಎಲೆಗಳು ಮೆಣಸಿನ ಸುವಾಸನೆಯನ್ನು ಹೊಂದಿರುತ್ತವೆ. ನಿಮ್ಮ ಬೆಳಗಿನ ಆವಕಾಡೊ ಟೋಸ್ಟ್, ಗ್ರೀನ್ ಸಲಾಡ್, ಸಾಸ್ ಮತ್ತು ಡಿಪ್ಸ್ ಗೆ ಸೇರಿಸಿ ಸೇವನೆ ಮಾಡುವುದು ಬಹಳ ಆರೋಗ್ಯಕರ.ಇದರಲ್ಲಿ ವಿಟಮಿನ್ ಬಿ 1, ಬಿ 2, ಬಿ 3, ಸಿ ಯಲ್ಲಿ ಮ್ಯಾಂಗನೀಸ್, ಕಬ್ಬಿಣ, ರಂಜಕ ಸೇರಿದಂತೆ ಹಲವಾರು ಪೋಷಕಾಂಶಗಳಿವೆ. ನಸ್ಟರ್ಷಿಯಮ್ ಔಷಧೀಯ ಪ್ರಯೋಜನಗಳನ್ನು ಸಹ ಹೊಂದಿದೆ. ಇದು ಸ್ನಾಯುವಿನ ನೋವನ್ನು ನಿವಾರಿಸಲು ಸಹಕಾರಿಯಾಗಿದ್ದು, ಗಿಡಮೂಲಿಕೆಗಳ ಸಾರವನ್ನು ಹೊಂದಿರುವ ನಸ್ಟರ್ಷಿಯಮ್ ಯುಟಿಐ, ಕೆಮ್ಮು ಮತ್ತು ಬ್ರಾಂಕೈಟಿಸ್ ರೋಗಗಳನ್ನು ಗುಣಪಡಿಸುತ್ತದೆ.